ಆಗ್ರಾ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಲ್ಮೆಟ್ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರನಿಗೆ ರಾಘವೇಂದ್ರ ಕುಮಾರ್ ಎಂಬ ರಸ್ತೆ ಸುರಕ್ಷತಾ ಹೋರಾಟಗಾರ ಉಚಿತ ಹೆಲ್ಮೆಟ್ ನೀಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ತಮ್ಮ ಕಾರನ್ನು ನಿಲ್ಲಿಸಿ ಅವರಿಗೆ ಹೊಚ್ಚ ಹೊಸ ಹೆಲ್ಮೆಟ್ ನೀಡಿದರು.
‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಟ್ವಿಟರ್ ಖಾತೆಯ ಹ್ಯಾಂಡಲ್ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರ ಕುಮಾರ್ ತಮ್ಮ ಕಾರನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿರುವುದನ್ನು ತೋರಿಸುತ್ತದೆ ಮತ್ತು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿಗೆ ಹೊಚ್ಚಹೊಸ ಹೆಲ್ಮೆಟ್ ಅನ್ನು ತೋರಿಸುವ ಮೂಲಕ ನಿಲ್ಲಿಸುವಂತೆ ಸೂಚಿಸುತ್ತಾರೆ.
ಹೆಲ್ಮೆಟ್ ಅನ್ನು ಹಸ್ತಾಂತರಿಸಿದ ನಂತರ, ರಾಘವೇಂದ್ರ ಅವರು, ಆ ವ್ಯಕ್ತಿಗೆ ಸವಾರಿ ಮಾಡುವಾಗ ಅದನ್ನು ಧರಿಸಲು ಸಲಹೆ ನೀಡುತ್ತಾರೆ. ವ್ಯಕ್ತಿ ತನ್ನನ್ನು ಇಟಾವಾದ ನಿಖಿಲ್ ತಿವಾರಿ ಎಂದು ಪರಿಚಯಿಸಿಕೊಂಡಿದ್ದಾನೆ.