ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅರ್ಜೆಂಟೀನಾದ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕ ಮತ್ತು ಲಿಗ್ 1 ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್‌ನ ಫಾರ್ವರ್ಡ್ ಆಟಗಾರ. ಸಾರ್ವಕಾಲಿಕ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಇವರು ಗುರುತಿಸಲ್ಪಟ್ಟಿದ್ದಾರೆ.
ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರ ಪ್ಯಾರಿಸ್ ಸೇಂಟ್-ಜರ್ಮೈನ್ ವಿಜಯಶಾಲಿಯಾಗಿತ್ತು. ಈ ವಿಜಯಕ್ಕೆ ಸಂಪೂರ್ಣ ಕಾರಣೀಭೂತರಾದವರು ಮೆಸ್ಸಿ ಎಂದು ಬೇರೆ ಹೇಳಬೇಕಾಗಿಲ್ಲ.
ಇದೀಗ ಈ ಪಂದ್ಯದ ಅಂತಿಮ ಕ್ಷಣದ ರೋಚಕ ವಿಡಿಯೋಗಳು ವೈರಲ್ ಆಗುತ್ತಿದ್ದು, ಮೆಸ್ಸಿಗಿಂತ ಇನ್ನೊಬ್ಬ ಡಿಬ್ಲರ್ ಇಲ್ಲ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, Twitter ನಲ್ಲಿ @FutbolJan10 ರವರು ರಚಿಸಿರುವ ಸಂಕಲನ, ‘ಲಿಯೋ ಮೆಸ್ಸಿ- ಸಾರ್ವಕಾಲಿಕ ಅತ್ಯುತ್ತಮ ಡ್ರಿಬ್ಲರ್’ ಎಂದು ಶೀರ್ಷಿಕೆ ನೀಡಲಾಗಿದ್ದು, ಮೆಸ್ಸಿಯವರ ಸಾಧನೆಯನ್ನು ಬಣ್ಣಿಸಲಾಗಿದೆ.
2020 ರಲ್ಲಿ, ಮೆಸ್ಸಿ ಬ್ಯಾಲನ್ ಡಿ’ಓರ್ ಡ್ರೀಮ್ ತಂಡಕ್ಕೆ ಆಯ್ಕೆಯಾದರು. ಬಾರ್ಸಿಲೋನಾದಲ್ಲಿ ತಮ್ಮ ಸಂಪೂರ್ಣ ವೃತ್ತಿಪರ ವೃತ್ತಿಜೀವನವನ್ನು ಕಳೆದಿರುವ ಇವರು, ಅಲ್ಲಿ 35 ಟ್ರೋಫಿಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಇದರಲ್ಲಿ ಹತ್ತು ಲಾ ಲಿಗಾ ಚಾಂಪಿಯನ್‌ಶಿಪ್‌ಗಳು, ಏಳು ಕೋಪಾ ಡೆಲ್ ರೇ ಚಾಂಪಿಯನ್‌ಶಿಪ್‌ಗಳು ಮತ್ತು 4 UEFA ಚಾಂಪಿಯನ್ಸ್ ಲೀಗ್‌ಗಳು ಸೇರಿವೆ.
https://twitter.com/FutbolJan10/status/1618569889807208452?ref_src=twsrc%5Etfw%7Ctwcamp%5Etweetembed%7Ctwterm%5E1618569889807208452%7Ctwgr%5E57d36f4d14543489f7de4cc4654cb506a0ec860f%7Ctwcon%5Es1_&ref_url=https%3A%2F%2Findianexpress.com%2Farticle%2Fsports%2Ffootball%2Fwatch-lionel-messi-the-best-dribbler-of-all-time-video-goes-viral-8407244%2F