ಶ್ರೀನಗರ ಜಿಲ್ಲೆಯ ಕಾಶ್ಮೀರಿ ಸಂಗೀತಗಾರರ ಗುಂಪು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ವಿಡಂಬನಾತ್ಮಕ ಖವ್ವಾಲಿಯನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಂಗೀತಗಾರರು ಕಾಶ್ಮೀರದಲ್ಲಿನ ವಿದ್ಯುತ್ ಪರಿಸ್ಥಿತಿಯನ್ನು ಹೈಲೈಟ್ ಮಾಡಲು ಖವ್ವಾಲಿ ರೂಪದಲ್ಲಿ ಹಾಡನ್ನು ಹಾಡಿದ್ದಾರೆ. ಇದು ಅನೇಕ ಹೃದಯಗಳನ್ನು ಮುಟ್ಟಿದೆ.
ಕಾಶ್ಮೀರದ ಖ್ಯಾತ ಕವಿ ಪಿರ್ ಜಹೂರ್ ಬರೆದ ಹಾಡನ್ನು ಯುವ ಗಾಯಕ-ಸಂಯೋಜಕ ನಾಸಿರ್ ಅಹ್ಮದ್ ಅವರ ಸಹೋದ್ಯೋಗಿಗಳಾದ ಅನಾಸ್ ಇಬ್ನ್ ತಾರಿಕ್ ಮತ್ತು ಅಹ್ಮದ್ ಸಬೀರ್ ಹಾಡಿದ್ದಾರೆ. ಸಂಗೀತ ನಿರ್ಮಾಣವನ್ನು ರಸಾಖ್ ಇಮ್ತಿಯಾಜ್ ಮಾಡಿದ್ದು, ವಿಡಿಯೋ ಮತ್ತು ಸೆಟಪ್ ಅನ್ನು ಎಂಜೆ ನಾಸಿರ್ ಮಾಡಿದ್ದಾರೆ.
ಕಳಪೆ ವಿದ್ಯುತ್ ಪರಿಸ್ಥಿತಿಯನ್ನು ವ್ಯಂಗ್ಯವಾಡುವ ಈ ಖವ್ವಾಲಿ ಸಾರ್ವಜನಿಕರಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಖವ್ವಾಲಿಯಲ್ಲಿ ತಿಳಿಸಿರುವ ವಿದ್ಯುತ್ ಸಮಸ್ಯೆಗೆ ಜನ ಹಾಗೂ ಅಧಿಕಾರಿಗಳಿಬ್ಬರನ್ನೂ ಸಮಾನ ಹೊಣೆಗಾರರನ್ನಾಗಿ ಮಾಡಲಾಗಿದೆ. ಅನೇಕ ಪದ್ಯಗಳು ಸಾಕಷ್ಟು ಆಸಕ್ತಿದಾಯಕ ಮತ್ತು ಹೃದಯವನ್ನು ಸ್ಪರ್ಶಿಸುವ ಸಂಗೀತಗಾರರ ಗುಂಪು ಅದನ್ನು ಪ್ರಭಾವಶಾಲಿಯಾಗಿ ಚಿತ್ರೀಕರಿಸಿದೆ.
ಈ ಖವ್ವಾಲಿಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ಕುಂದು ಕೊರತೆಗಳನ್ನು ಅರಿಯುವಂತೆ ವ್ಯಂಗ್ಯವಾಗಿ ಎತ್ತಿ ತೋರಿಸಲು ಪ್ರಯತ್ನಿಸಿದ್ದಾರೆ ಎಂದು ನಾಸೀರ್ ಅಹಮದ್ ಹೇಳಿದ್ದಾರೆ.
https://youtu.be/KuSo_NV0uEg