ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ನ ಹೋಟೆಲ್ವೊಂದರಲ್ಲಿ ಭಾನುವಾರ ಅತಿಥಿಗಳು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಘರ್ಷಣೆ ಉಂಟಾಗಿ ಮದುವೆ ಮನೆಯು ಗದ್ದಲದ ಕೇಂದ್ರವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹೋಟೆಲ್ ಸಿಬ್ಬಂದಿ ದೊಣ್ಣೆಗಳು, ರಾಡ್ಗಳು ಮತ್ತು ಬೆಲ್ಟ್ಗಳನ್ನು ಹಿಡಿದುಕೊಂಡು ಅತಿಥಿಗಳನ್ನು ಹೊಡೆಯುವುದನ್ನು ನೋಡಬಹುದಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಭಯದಿಂದ ಕಿರುಚುತ್ತಿರುವುದನ್ನು ಕಾಣಬಹುದು.
ಕೆಲವು ಪುರುಷರು ಮತ್ತು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ನೆಲದ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ದಿ ಗ್ರ್ಯಾಂಡ್ ಐ ಆರ್ಎಸ್ ಹೋಟೆಲ್ನ ಸಿಬ್ಬಂದಿ ಮಧ್ಯರಾತ್ರಿ ಡಿಜೆ ಸಮಾರಂಭಕ್ಕೆ ನಿರಾಕರಿಸಿದ ನಂತರ ಈ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಹೋಟೆಲ್ನ ಬೌನ್ಸರ್ಗಳು ಮತ್ತು ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಘಟನೆಯಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ಈ ಹೋಟೆಲ್ ಬಿಜೆಪಿ ಮುಖಂಡರೊಬ್ಬರದ್ದು ಎಂದು ಹೇಳಲಾಗುತ್ತಿದೆ. ಸದ್ಯ ಒಂಬತ್ತು ಜನರನ್ನು ಬಂಧಿಸಲಾಗಿದೆ. ವೀಡಿಯೋ ಆಧಾರದ ಮೇಲೆ ಪೊಲೀಸರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
https://twitter.com/yadavakhilesh/status/1629774714796400640?ref_src=twsrc%5Etfw%7Ctwcamp%5Etweetembed%7Ctwterm%