ಮಿಲನ್ ಫ್ಯಾಷನ್ ವೀಕ್​ನಲ್ಲಿ ಗಮನ ಸೆಳೆದ ʼಕಾಂಡೋಮ್ʼ​ ರಾಶಿ

ಮಿಲನ್ ಫ್ಯಾಷನ್ ವೀಕ್ 2023 ಆರಂಭಗೊಂಡಿದ್ದು, ಈ ಬಾರಿಯ ಪ್ರದರ್ಶನ ಜನರ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಗಮನ ಸೆಳೆದಿದೆ. ಏಕೆಂದರೆ, ಈ ಕಾರ್ಯಕ್ರಮದಲ್ಲಿ ಕಲಾವಿದರು, ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಬೇಕಾದ ಸೆಟ್ ಮೇಲೆ ನಿರ್ಮಿಸಲಾಗಿದ್ದು ಕಾಂಡೋಮ್​ಗಳನ್ನು. ಹೌದು, ಕಾಂಡೋಮ್​ನ ಬೆಟ್ಟವೊಂದು ಫ್ಯಾಷನ್​ ವೀಕ್​ನಲ್ಲಿ ಗಮನ ಸೆಳೆದಿದೆ.

ಈ ಕಾಂಡೋಮ್‌ಗಳ ದೈತ್ಯ ಪರ್ವತದ ಸುತ್ತಲೂ ಮಾಡೆಲ್​ಗಳು ಕ್ಯಾಟ್​ವಾಕ್​ ಮಾಡಿದ್ದಾರೆ. ಪ್ರಸಿದ್ಧ ಬಟ್ಟೆ ಬ್ರ್ಯಾಂಡ್ ಡೀಸೆಲ್ ಈ ಒಂದು ಹೊಸ ಪ್ರಯೋಗವನ್ನು ಮಾಡಿದೆ. ಸ್ವಾತಂತ್ರ್ಯ, ಆನಂದ ಮತ್ತು ಪ್ರಯೋಗ ಎನ್ನುವುದು ಇದರ ಧ್ಯೇಯವಾಕ್ಯ ಎಂದು ಕಂಪೆನಿ ಹೇಳಿದೆ.

ಈ ಕಾಂಡೋಮ್ ರಾಶಿಯ ಸಹಾಯದಿಂದ ವಿಶ್ವದಾದ್ಯಂತ ಸುರಕ್ಷಿತ ಲೈಂಗಿಕ ಸಂದೇಶವನ್ನು ಪ್ರಚಾರ ಮಾಡಲು ಕಂಪೆನಿಯು ಬಯಸುತ್ತದೆ ಎಂದು ಅದು ಹೇಳಿಕೊಂಡಿದೆ. ಇದಕ್ಕಾಗಿ ಡೀಸೆಲ್ ಕಂಪೆನಿ ಡ್ಯೂರೆಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬರುವ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಸುಮಾರು 3 ಲಕ್ಷ ಕಾಂಡೋಮ್‌ಗಳನ್ನು ನೀಡಲು ಇದು ಯೋಜನೆ ರೂಪಿಸಿದೆ. ಇದರ ತಯಾರಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದೆ. ಈ ಫ್ಯಾಷನ್ ವಾರದಲ್ಲಿ ಪರ್ವತವನ್ನು ತಯಾರಿಸಲು ಸುಮಾರು 2 ಲಕ್ಷ ಕಾಂಡೋಮ್‌ಗಳನ್ನು ಬಳಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read