ಮುಂಬೈ ಮೂಲದ ಎನ್‌ಆರ್‌ಐ ಒಬ್ಬರು ನ್ಯೂಯಾರ್ಕ್ ಭೇಟಿ ವೇಳೆ ಅಮೆರಿಕನ್ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮುಂಬೈ ಹಾಗೂ ನ್ಯೂಯಾರ್ಕ್‌ಗಳಲ್ಲಿ ಜೀವನ ಹೇಗೆ ಇರುತ್ತದೆ ಎಂದು ಇನ್‌ಸ್ಟಾಗ್ರಾಂ ಬಳಕೆದಾರ ಅಮೆರಿಕನ್ ವ್ಯಕ್ತಿಯನ್ನು ಕೇಳುತ್ತಾರೆ. ಇದಕ್ಕೆ ಹಿಂದಿಯಲ್ಲೇ ಉತ್ತರಿಸುವ ಅಮೆರಿಕನ್, ಮುಂಬೈಯಲ್ಲಿ ಬದುಕು ’ಫರ್ಸ್ಟ್ ಕ್ಲಾಸ್’ ಎಂಧಿದ್ದಾರೆ. ಭಾರತದ ಆರ್ಥಿಕ ರಾಜಧಾನಿಯಲ್ಲಿ ರಾಜನ ಹಾಗೆ ಜೀವಿಸುತ್ತಿದ್ದಿದ್ದಾಗಿ ಹೇಳಿಕೊಂಡಿದ್ದಾರೆ ಈ ಅಮೆರಿಕನ್.
ನ್ಯೂಯಾರ್ಕ್‌ಗೆ ಧಾವಿಸುತ್ತಲೇ ತಾನೊಬ್ಬ ’ಬೆತ್ತಲೆ ಭಿಕ್ಷುಕ’ನಾಗಿದ್ದಾಗಿ ಹೇಳಿಕೊಂಡಿರುವ ಇವರು, ಅಮೆರಿಕದ ಮೆಟ್ರೋಪಾಲಿಟನ್ ನಗರಿಯಲ್ಲಿ ಬದುಕು ಅದೆಷ್ಟು ಸವಾಲಿನದ್ದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
“ಭಾರತದಲ್ಲಿ ಐದು ವರ್ಷಗಳ ಕಾಲ ವಾಸವಿದ್ದ ನ್ಯೂಯಾರ್ಕರ್ ಒಬ್ಬರನ್ನು ಭೇಟಿ ಮಾಡಿದೆ ! ಅವರು ಅದ್ಭುತವಾಗಿ ಹಿಂದಿಯಲ್ಲಿ ಮಾತನಾಡಿದ್ದು, ಮುಂಬೈ ಬದುಕು ರಾಜನಂತೆ ಇದ್ದು, ನ್ಯೂಯಾರ್ಕ್‌ನ ಜೀವನ ಜಂಜಾಟಮಯ ಎಂದಿದ್ದಾರೆ. ಎಂಥ ವ್ಯಕ್ತಿ. ಬ್ರಾಡ್‌ವೇನಲ್ಲಿ ಎಂಡಿ ಆಗಿರುವ ಇವರು ಅಲ್ಲಿನ ಶೋ ಒಂದಕ್ಕೆ ಉಚಿತವಾಗಿ ಟಿಕೆಟ್ ಸಹ ನೀಡಿದ್ದಾರೆ,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋ ಶೇರ್ ಮಾಡಲಾಗಿದೆ.
ಭಾರೀ ವೈರಲ್ ಆಗಿರುವ ಈ ವಿಡಿಯೋಗೆ 36 ಲಕ್ಷ ವೀಕ್ಷಣೆಗಳು ಸಿಕ್ಕಿದ್ದು, 4.23 ಲಕ್ಷ ಲೈಕ್‌ಗಳು ಸಂದಾಯವಾಗಿವೆ.
https://youtu.be/vHhyBtuhYHc