
ಟ್ವಿಟ್ಟರ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು 30 ಸೆಕೆಂಡ್ಗಳ ವಿಡಿಯೋದಲ್ಲಿ ಮುದ್ದಾದ ಪುಟ್ಟ ನಾಯಿಮರಿಯು ಭಾರತೀಯ ಶಾಸ್ತ್ರೀಯ ನೃತ್ಯ ಸಂಗೀತವನ್ನು ಆನಂದಿಸುತ್ತಿರುವುದನ್ನು ನೋಡಬಹುದು.
ಯುವತಿಯೊಬ್ಬಳು ತನ್ನ ಕೈಯಲ್ಲಿ ಮುದ್ದಾಗಿರುವ ಬೀಗಲ್ ನಾಯಿಮರಿಯನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿನ್ನೆಲೆಯಲ್ಲಿ ಸುಮಧುರವಾದ ಭಾರತೀಯ ಶಾಸ್ತ್ರೀಯ ನೃತ್ಯ ಸಂಗೀತವನ್ನು ಸಹ ಕೇಳಬಹುದು. ಸಂಗೀತವು ಪ್ಲೇ ಆಗುತ್ತಿದ್ದಂತೆ, ನಾಯಿಮರಿಯು ಅದನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದು ತನ್ನ ತಲೆಯನ್ನು ಅಕ್ಕಪಕ್ಕಕ್ಕೆ ಬಗ್ಗಿಸುತ್ತದೆ ಮತ್ತು ತಮಾಷೆಯ ಮುಖಗಳನ್ನು ಮಾಡುತ್ತದೆ.
ಈ ವಿಡಿಯೋ ಇದಾಗಲೇ 2.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 6836 ಇಷ್ಟಗಳು ಮತ್ತು 600 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ. ಇಂಟರ್ನೆಟ್ ಬಳಕೆದಾರರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.