ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇಲಿಗಳು ವಾಸಮಾಡುತ್ತವೆ. ಧಾನ್ಯಗಳನ್ನು ತಿಂದು ಕೆಡಿಸುತ್ತವೆ, ಕೊಳಕು ಮಾಡುತ್ತವೆ. ಇಷ್ಟು ಮಾತ್ರವಲ್ಲ ಇಲಿಗಳಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಇಲಿಗಳಿಂದ ಹರಡುವ ರೋಗಗಳು ಮನುಷ್ಯರಿಗೂ ಬರಬಹುದು, ಕೆಲವೊಮ್ಮೆ ಇದು ಮಾರಕವಾಗಬಹುದು.
ಇಲಿಗಳಿಂದ ಹರಡುವ ಕೆಲವು ರೋಗಗಳಲ್ಲಿ ಕೆಮ್ಮು ಮತ್ತು ಶೀತದಂತಹ ಆರಂಭಿಕ ಲಕ್ಷಣಗಳಿರುತ್ತವೆ. ಆದ್ದರಿಂದ ಈ ಕಾಯಿಲೆಗಳನ್ನು ಸಾಮಾನ್ಯವಾಗಿ ನೆಗಡಿ ಅಥವಾ ಜ್ವರವೆಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಹಾಗಾಗಿ ಈ ರೋಗಗಳನ್ನು ನಿರ್ಲಕ್ಷಿಸುವುದು ಸಾವಿಗೆ ಕಾರಣವಾಗಬಹುದು. ಇಲಿಗಳಿಂದ ಹರಡುವ 5 ರೋಗಗಳ ಬಗ್ಗೆ ತಿಳಿದುಕೊಳ್ಳೋಣ.
ಲೆಪ್ಟೊಸ್ಪಿರೋಸಿಸ್ – ಲೆಪ್ಟೊಸ್ಪಿರೋಸಿಸ್, ಬ್ಯಾಕ್ಟೀರಿಯಾದ ಸೋಂಕು. ಇದು ಇಲಿ ಮೂತ್ರದ ಸಂಪರ್ಕದ ಮೂಲಕ ಹರಡುತ್ತದೆ. ಈ ಸೋಂಕು ಜ್ವರ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ವಾಂತಿ ಮುಂತಾದ ಲಕ್ಷಣಗಳನ್ನು ಉಂಟುಮಾಡಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಮೂತ್ರಪಿಂಡ ವೈಫಲ್ಯ ಅಥವಾ ಸಾವಿಗೆ ಕಾರಣವಾಗಬಹುದು.
ಪ್ಲೇಗ್ – ಪ್ಲೇಗ್ ಕೂಡ ಬ್ಯಾಕ್ಟೀರಿಯಾದ ಸೋಂಕು, ಇದು ಇಲಿಗಳ ಕಡಿತದಿಂದ ಹರಡುತ್ತದೆ. ಈ ಸೋಂಕು ಜ್ವರ, ಆಯಾಸ ಮತ್ತು ಬೆವರುವಿಕೆಯಂತಹ ಲಕ್ಷಣಗಳನ್ನು ಉಂಟುಮಾಡಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಪ್ಲೇಗ್ ಕೂಡ ಸಾವಿಗೆ ಕಾರಣವಾಗುತ್ತದೆ.
ಕ್ಷಯರೋಗ – ಕ್ಷಯವು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗವಾಗಿದೆ. ಇದು ಇಲಿಗಳ ಮಲ ಅಥವಾ ಮೂತ್ರದ ಸಂಪರ್ಕದ ಮೂಲಕ ಹರಡಬಹುದು. ಈ ಸೋಂಕು ಕೆಮ್ಮು, ಆಯಾಸ, ತೂಕ ನಷ್ಟ ಮತ್ತು ಜ್ವರದಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ.
ವೈರಲ್ ಹೆಮರಾಜಿಕ್ ಜ್ವರ – ವೈರಲ್ ಹೆಮರಾಜಿಕ್ ಜ್ವರವು ಇಲಿಗಳ ಕಡಿತದಿಂದ ಹರಡುತ್ತದೆ. ಈ ಸೋಂಕಿಗೆ ತುತ್ತಾದರೆ ಜ್ವರ, ರಕ್ತಸ್ರಾವ ಮತ್ತು ಅಂಗ ಹಾನಿಯಾಗಬಹುದು.
ಕಾಲರಾ – ಕಾಲರಾ ಒಂದು ಬ್ಯಾಕ್ಟೀರಿಯಾದ ಸೋಂಕು, ಇದು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಈ ಸೋಂಕು ಅತಿಸಾರ, ವಾಂತಿ ಮತ್ತು ಹೊಟ್ಟೆ ಸೆಳೆತವನ್ನುಂಟುಮಾಡುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ ಇದು ಸಾವಿಗೆ ಸಹ ಕಾರಣವಾಗಬಹುದು.
ಇಲಿಗಳಿಂದ ಉಂಟಾಗುವ ರೋಗಗಳನ್ನು ತಪ್ಪಿಸು ವುದು ಹೇಗೆ ?
– ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿ.
– ಇಲಿಗಳು ನಿಮ್ಮ ಮನೆಗೆ ಪ್ರವೇಶಿಸದಂತೆ ತಡೆಯಿರಿ.
– ಇಲಿಗಳಿಂದ ಕಚ್ಚಿಸಿಕೊಳ್ಳಬೇಡಿ.
– ಇಲಿಗಳಿಂದ ಯಾವುದಾದರೂ ರೋಗ ತಗುಲಿದೆ ಎಂದೆನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
– ಪದೇ ಪದೇ ಕೆಮ್ಮು ಮತ್ತು ಶೀತವನ್ನು ಹೊಂದಿದ್ದರೆ, ಇದು ಇಲಿಗಳಿಂದ ಹರಡುವ ಕೆಲವು ಕಾಯಿಲೆಯ ಲಕ್ಷಣವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಅವಶ್ಯಕ.