ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರದ ಪೋಸ್ಟ್ ಹಾಗೂ ಸುಳ್ಳು ಸುದ್ದಿಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲೂ ಸಹ ಸುಳ್ಳು ಸುದ್ದಿಗಳು ಹೆಚ್ಚಾಗಿದ್ದು, ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಿದೆ ಎನ್ನಲಾಗಿದೆ. ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು, ನಕಲಿ ಪೋಸ್ಟ್ ಹಾವಳಿಯನ್ನ ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಸ್ ಚೆಕ್ ಘಟಕವನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪೋಸ್ಟ್ ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್
ಮಾನ್ಯ ಮಾಧ್ಯಮ ಮಿತ್ರರು ಈ ರೀತಿ ಕಪೋಲಕಲ್ಪಿತ ವರದಿ ಮಾಡುವ ಮುನ್ನ ದಯಮಾಡಿ ನನ್ನನ್ನಾಗಲಿ ಅಥವಾ ಶ್ರೀ ಸತೀಶ್ ಜಾರಕಿಹೊಳಿಯವರನ್ನಾಗಲಿ ಸಂಪರ್ಕಿಸಿ ಪ್ರತಿಕ್ರಿಯೆ ಪಡೆದಿದ್ದರೆ ಈ ರೀತಿ ಜನರಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ಸುದ್ದಿ ಹರಡುತ್ತಿರಲಿಲ್ಲ. ನಾನು ಸದಾ ಕೇವಲ ಒಂದು ಫೋನ್ ಕಾಲ್ ದೂರದಲ್ಲಿದ್ದೇನೆ. ನನ್ನ ಕಚೇರಿ ಅಥವಾ ಮಾಧ್ಯಮ ಸಂಯೋಜಕರನ್ನಾದರೂ ಸಂಪರ್ಕಿಸಿದ್ದರೆ ನಾವೇ ಸ್ಪಷ್ಟೀಕರಣ ನೀಡುತ್ತಿದ್ದೆವು. ನಮ್ಮ ಸರ್ಕಾರದ ಎಲ್ಲಾ ಸಚಿವರು ಕಾನೂನುಬದ್ಧವಾಗಿಯೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ “?” ಬಳಸಿ ಹೆಡ್ ಲೈನ್ ಹಾಕಿ ಈ ರೀತಿ ಸುಳ್ಳು ಸುದ್ದಿಗೆ ಯಾರೂ ಮುಂದಾಗಬಾರದು. ಮಾಧ್ಯಮಗಳು ತಮ್ಮ ವರದಿಗಾರಿಕೆಯಲ್ಲಿ ಸ್ಪಷ್ಟವಾಗಿ ಸತ್ಯಾಂಶವನ್ನು ಪರಿಗಣಿಸಿ ವರದಿ ಮಾಡುವಂತೆ ಈ ಮೂಲಕ ಕೋರಿಕೊಳ್ಳುತ್ತೇನೆ.
https://twitter.com/PriyankKharge/status/1683040287374069763?ref_src=twsrc%5Egoogle%7Ctwcamp%5Eserp%7Ctwgr%5Etweet