ಉದ್ದವಾದ, ಬಲವಾದ, ದಪ್ಪವಾದ ಕೂದಲನ್ನು ಪಡೆಯಲು ವಿಭಿನ್ನ ರೀತಿಯ ತೈಲಗಳನ್ನು ಬಳಸುತ್ತೇವೆ. ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಹರಳೆಣ್ಣೆ ಮುಂತಾದ ಎಣ್ಣೆಗಳನ್ನು ಹಚ್ಚುತ್ತೇವೆ. ಆದರೆ ವಾಲ್ ನಟ್ ಎಣ್ಣೆಯನ್ನು ಕೂದಲಿಗೆ ಬಳಸಬಹುದೇ? ಬಳಸಿದರೆ ಏನಾಗುತ್ತದೆ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ವಾಲ್ ನಟ್ಸ್ ಎಣ್ಣೆಯಲ್ಲಿ ಒಮೆಗಾ3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಇದು ಶಿಲೀಂದ್ರ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಕೂದಲಿಗೆ ಹಚ್ಚಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಹೊಳೆಯುವ, ಉದ್ದವಾದ, ದಪ್ಪವಾದ ಕೂದಲನ್ನು ಪಡೆಯಬಹುದು.
ಈ ಎಣ್ಣೆ ನೆತ್ತಿಯಲ್ಲಿರುವ ಕೊಳಕು, ಕಲ್ಮಶಗಳನ್ನು ತೆಗೆದು ಹಾಕುತ್ತದೆ. ನೆತ್ತಿಯ ಸೋಂಕನ್ನು ನಿವಾರಿಸುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಒಮೆಗಾ3 ಕೋಶಗಳ ಹಾನಿಯನ್ನು ತಡೆದು ಕೂದಲು ಉದುರುವುದನ್ನು ನಿವಾರಿಸುತ್ತದೆ. ಹೊಸ ಕೂದಲು ಹುಟ್ಟಲು ಸಹಕರಿಸುತ್ತದೆ.