ಸಾಮಾಜಿಕ ಮಾಧ್ಯಮದಲ್ಲಿ ಒಂದು ವಾಹನದ ವೀಡಿಯೋ ವೈರಲ್ ಆಗಿದ್ದು, ಇದು ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ. ಈ ವಾಹನವು ಹಳೆಯ ವ್ಯಾಗನ್ ಆರ್ ಕಾರಿನ ರಚನೆಯನ್ನು ಆಟೋರಿಕ್ಷಾದ ಮೇಲೆ ಅಳವಡಿಸಿ ಮಾಡಲಾಗಿದೆ.
ಈ ವಿಡಿಯೋವನ್ನು ಮೊದಲು @realshubhamsharma ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು, ಇದು ಕ್ಷಣಾರ್ಧದಲ್ಲಿ ವೈರಲ್ ಆಗಿ ಹಲವಾರು ಲೈಕ್ಗಳು ಮತ್ತು ಕಾಮೆಂಟ್ಗಳನ್ನು ಪಡೆದುಕೊಂಡಿದೆ.
ವೀಡಿಯೋದಲ್ಲಿ, ಆಟೋರಿಕ್ಷಾ ಮೂರು ಚಕ್ರಗಳ ಮೇಲೆ ಚಲಿಸುತ್ತಿದ್ದರೂ, ಹಿಂಭಾಗದಲ್ಲಿ ವ್ಯಾಗನ್ ಆರ್ ಕಾರಿನ ಅರ್ಧ ಭಾಗವನ್ನು ನೋಡಬಹುದು.
ಈ ವಿಚಿತ್ರ ಸೃಷ್ಟಿಯನ್ನು ನೋಡಿದ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ವ್ಯಾಗನ್ ಆರ್ ನ ಹೊಸ ಮಾಡೆಲ್ ಎಂದು ವ್ಯಂಗ್ಯವಾಗಿ ಹೇಳಿದರೆ, ಇನ್ನು ಕೆಲವರು ಇಂತಹ ಸೃಜನಶೀಲತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಾನೂನುಬದ್ಧವೇ ?
ಈ ರೀತಿಯ ವಾಹನ ಮಾರ್ಪಾಡು ಕಾನೂನುಬದ್ಧವೇ ಎಂಬ ಪ್ರಶ್ನೆ ಉದ್ಭವಿಸಿದೆ. ಭಾರತದಲ್ಲಿ ಪ್ರತಿಯೊಂದು ವಾಹನಕ್ಕೂ ಒಂದು ವಿಶಿಷ್ಟವಾದ ಚಾಸಿಸ್ ಸಂಖ್ಯೆ ಇರುತ್ತದೆ. ಈ ಸಂಖ್ಯೆಯನ್ನು ಬದಲಾಯಿಸುವುದು ಕಾನೂನುಬಾಹಿರ. ಹೀಗಾಗಿ, ಈ ರೀತಿಯ ಮಾರ್ಪಾಡು ವಾಹನದ ನೋಂದಣಿಯನ್ನು ರದ್ದುಗೊಳಿಸಬಹುದು.