alex Certify ವಿಧಾನಸಭೆ ಚುನಾವಣೆ: ಮತದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಮತಗಟ್ಟೆಗಳಲ್ಲಿ ಹಲವು ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸಭೆ ಚುನಾವಣೆ: ಮತದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಮತಗಟ್ಟೆಗಳಲ್ಲಿ ಹಲವು ಸೌಲಭ್ಯ

ಬೆಂಗಳೂರು: ಬಿಸಿ ಗಾಳಿ, ಉರಿ ಬಿಸಿಲ ನಡುವೆ ಮತದಾನಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಬಹುದೆನ್ನುವ ಕಾರಣಕ್ಕೆ ಮತದಾರರ ಸುರಕ್ಷತೆಗೆ ಚುನಾವಣಾ ಆಯೋಗ ವಿಶೇಷ ಕಾಳಜಿ ವಹಿಸಿದ್ದು, ಹಲವು ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದೆ.

ಮೇ 10 ರಂದು ಮತಗಟ್ಟೆಗಳಲ್ಲಿ ಶಾಮಿಯಾನ, ವಿಶ್ರಾಂತಿ ಕೊಠಡಿ, ರ್ಯಾಂಪ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗುವುದು. ಆಸನ ವ್ಯವಸ್ಥೆಯೊಂದಿಗೆ ನಿರೀಕ್ಷಣಾ ಕೊಠಡಿ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಹೆಲ್ಪ್ ಡೆಸ್ಕ್, ಫ್ಯಾನ್ ಸೌಲಭ್ಯ ಒದಗಿಸಲಾಗುವುದು.

ಇದರೊಂದಿಗೆ ಮತಗಟ್ಟೆಯಲ್ಲಿನ ಸರತಿ ಸಾಲಿನ ಬಗ್ಗೆ ಕ್ಯೂ ಆಪ್ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ ಉಷ್ಣಾಂಶ ಹೆಚ್ಚಾಗಿರುವುದರಿಂದ ಮೇ 10ರಂದು ನಡೆಯುವ ಮತದಾನಕ್ಕೆ ಅಡ್ಡಿಯಾಗಬಾರದೆನ್ನುವ ಉದ್ದೇಶದಿಂದ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಬಹುದಾಗಿದೆ. ಸಂಜೆ 6 ಗಂಟೆಯೊಳಗೆ ಸರತಿ ಸಾಲಿನಲ್ಲಿ ಸೇರಿಕೊಂಡರೆ ರಾತ್ರಿ ಎಷ್ಟು ಸಮಯವಾದರೂ ಮತದಾನ ಮಾಡಲು ಅವಕಾಶವಿದೆ. ಎಲ್ಲಾ 58,282 ಮತಗಟ್ಟೆಗಳಲ್ಲಿ ಕನಿಷ್ಠ ಕಡ್ಡಾಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಅಲ್ಲದೇ, ಆರೋಗ್ಯ ಸಂಬಂಧಿ ತುರ್ತು ಚಿಕಿತ್ಸೆಗಾಗಿ ಹೆಲ್ಪ್ ಡೆಸ್ಕ್ ಗಳನ್ನು ಸ್ಥಾಪನೆ ಮಾಡಲಾಗುವುದು. ಸರದಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪಿಸಲು ಕ್ಯೂ ಆಪ್ ವ್ಯವಸ್ಥೆ ಮಾಡಿದ್ದು, ಮತಗಟ್ಟೆ ಸಿಬ್ಬಂದಿ ಆಗಾಗ ಸರತಿಯ ಬಗ್ಗೆ ಮಾಹಿತಿ ಅಪ್ಲೋಡ್ ಮಾಡುತ್ತಾರೆ. ಸರತಿ ಕಡಿಮೆ ಇರುವ ಸಮಯ ನೋಡಿಕೊಂಡು ಮತದಾರರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಸರತಿಯಲ್ಲಿ ನಿಲ್ಲುವ ಕಷ್ಟ ತಪ್ಪಿಸಲು ಟೋಕನ್ ವ್ಯವಸ್ಥೆ ಮಾಡಲಾಗಿದೆ. ಮತದಾರರು ಟೋಕನ್ ಪಡೆದು ವಿಶ್ರಾಂತಿ ಕೊಠಡಿಯಲ್ಲಿ ಕೂರಬಹುದು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...