
ವಿಶ್ವದ ಪ್ರತಿಷ್ಟಿತ ಫ್ಯಾಷನ್ ಇವೆಂಟ್ ಮೆಟ್ ಗಾಲಾದಲ್ಲಿ ಗಮನಸೆಳೆದಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ನೆಕ್ಲೆಸ್ ಶೀಘ್ರದಲ್ಲೇ ಹರಾಜಾಗಲಿದೆ. ಪ್ರಿಯಾಂಕಾ ಚೋಪ್ರಾ ಅವರು ದಿವಂಗತ ಡಿಸೈನರ್ ಕಾರ್ಲ್ ಲಾಗರ್‌ಫೆಲ್ಡ್ ಅವರ ಗೌರವಾರ್ಥವಾಗಿ ಕಪ್ಪು, ಬಿಳಿ ಬಣ್ಣದ ವಸ್ತ್ರ ತೊಟ್ಟು ಪತಿ ನಿಕ್ ಜೋನಾಸ್ ಅವರೊಂದಿಗೆ ಮೆಟ್ ಗಾಲಾದ ರೆಟ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದರು.
ಈ ವೇಳೆ ಅವರ ಅದ್ಭುತ ಡ್ರೆಸ್ ಜೊತೆಗೆ ಧರಿಸಿದ್ದ ಡೈಮಂಡ್ ನೆಕ್ಲಸ್ ಕೂಡ ಗಮನ ಸೆಳೆದಿತ್ತು.ಅದರ ಬೆಲೆ ಬರೋಬ್ಬರಿ 204 ಕೋಟಿ ರೂಪಾಯಿ. ಪ್ರಿಯಾಂಕಾ ಇಟಾಲಿಯನ್ ಫ್ಯಾಷನ್ ಹೌಸ್ ಬಲ್ಗರಿಯ ಅಸಾಮಾನ್ಯ ವಿಂಟೇಜ್ ನೀಲಿ ವಜ್ರವನ್ನು ಒಳಗೊಂಡಿರುವ ಬೆಸ್ಪೋಕ್ ಬಲ್ಗರಿ ಹೈ ನೆಕ್ಲೇಸ್ ಅನ್ನು ಧರಿಸಿದ್ದರು. ಇದು ಬಲ್ಗರಿ ಲಗೂನ ಬ್ಲೂ ಕಂಪನಿ ತಯಾರಿಸಿದ ಅತ್ಯಮೂಲ ಅಭರಣ.
ಈ ವಜ್ರದ ಅತ್ಯಂತ ವಿಶೇಷತೆ ಏನೆಂದರೆ ಇದು 11.16 ಕ್ಯಾರೆಟ್ ನ ವಜ್ರದ ನೆಕ್ಲೆಸ್ ಆಗಿದ್ದು, ಬಲ್ಗರಿ ಇದುವರೆಗೆ ಬಳಸಿದ ಅತಿದೊಡ್ಡ ನೀಲಿ ವಜ್ರವಾಗಿದೆ. ಮತ್ತು ಅಷ್ಟೇ ಅಲ್ಲ ಇದು ಈ ಮೇ ತಿಂಗಳ ನಂತರ ಜಿನೀವಾದಲ್ಲಿ ಸೋಥೆಬಿನ್ ಹರಾಜಿನಲ್ಲಿ ಮಾರಾಟವಾಗಲಿದೆ.

