ಭಾರತೀಯ ರೈಲುಗಳು ನಮ್ಮ ದೇಶದ ಜೀವನಾಡಿ. ಅವುಗಳ ಜಾಲ ದೇಶಾದ್ಯಂತ ಹರಡಿಕೊಂಡಿದೆ. ಇದು ಇಡೀ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ರೈಲು ಜಾಲ ಎನಿಸಿಕೊಂಡಿದೆ. ಪ್ರತಿದಿನ ಕೋಟಿಗಟ್ಟಲೆ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲ ಭಾರತೀಯ ರೈಲ್ವೆ ಅತ್ಯಂತ ಅಗ್ಗದ ಸಾರಿಗೆ ಸಾಧನವಾಗಿದೆ. ಕಡಿಮೆ ಹಣದಲ್ಲಿ ದೂರದ ಪ್ರಯಾಣ ಮಾಡಬಹುದು.
ಭಾರತದಲ್ಲಿ 13 ಸಾವಿರಕ್ಕೂ ಹೆಚ್ಚು ರೈಲುಗಳು ಓಡುತ್ತವೆ. ಅವುಗಳಲ್ಲಿ ಸಮೀಪದ ಪ್ರಯಾಣಕ್ಕೆ ಮೀಸಲಾಗಿದ್ದರೆ ಇನ್ನು ಕೆಲವು ದೇಶದ ಒಂದು ಮೂಲೆಯಿಂದ ಇನ್ನೊಂದಕ್ಕೆ ಹೋಗುತ್ತವೆ. ಭಾರತದಲ್ಲಿ ಅತಿ ಹೆಚ್ಚು ದೂರ ಕ್ರಮಿಸುವ ರೈಲು ವಿವೇಕ್ ಎಕ್ಸ್‌ಪ್ರೆಸ್. ಇದು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಗೆ ಪ್ರಯಾಣಿಸುತ್ತದೆ.
ವಿವೇಕ್ ಎಕ್ಸ್‌ಪ್ರೆಸ್ ಟ್ರೈನ್, ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಗೆ ಪ್ರಯಾಣಿಸಲು ಸರಿಸುಮಾರು 82 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ರೈಲು ಶನಿವಾರ ರಾತ್ರಿ 11:05ಕ್ಕೆ ದಿಬ್ರುಗಢದಿಂದ ಹೊರಟು ಬುಧವಾರ ಬೆಳಗ್ಗೆ 9:55 ಕ್ಕೆ ಕನ್ಯಾಕುಮಾರಿ ತಲುಪುತ್ತದೆ. ಈ ಅವಧಿಯಲ್ಲಿ ರೈಲು ಸುಮಾರು 56 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ದಿಬ್ರುಗಢದಿಂದ ಕನ್ಯಾಕುಮಾರಿಗೆ ಸುಮಾರು 4,273 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸುತ್ತದೆ.
ಆದರೆ ಜಗತ್ತಿನಲ್ಲೇ ಅತಿ ಹೆಚ್ಚು ದೂರ ಕ್ರಮಿಸುವ ರೈಲಿಗೆ ಹೋಲಿಸಿದರೆ, ವಿವೇಕ್ ಎಕ್ಸ್‌ಪ್ರೆಸ್ ಅದರ ಅರ್ಧದಷ್ಟು ದೂರವನ್ನು ಮಾತ್ರ ಕ್ರಮಿಸುತ್ತದೆ. ರಷ್ಯಾದ ಟ್ರಾನ್ಸ್-ಸೈಬೀರಿಯನ್ ಮಾರ್ಗದಲ್ಲಿ ಚಲಿಸುವ ರೈಲು ವಿವೇಕ್ ಎಕ್ಸ್‌ಪ್ರೆಸ್‌ಗಿಂತ ಎರಡು ಪಟ್ಟು ದೂರ ಪ್ರಯಾಣಿಸುತ್ತದೆ.
ಇದು ಭಾರತದ ಎರಡನೇ ದೂರದ ರೈಲು
ಭಾರತದ ಎರಡನೇ ಅತಿ ದೂರದ ರೈಲಿನ ಹೆಸರು ಹಿಮಸಾಗರ್ ಎಕ್ಸ್‌ಪ್ರೆಸ್. ಇದು ಜಮ್ಮುವಿನ ಮಾ ವೈಷ್ಣೋದೇವಿ ಕತ್ರಾ ರೈಲು ನಿಲ್ದಾಣದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಚಲಿಸುತ್ತದೆ. ಹಿಮಸಾಗರ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಸರಿಸುಮಾರು 72 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ರೈಲು 3,785 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.