Viral Video | ಟಿಕೆಟ್​ ಸಮೇತ ಮೇಕೆಯೊಂದಿಗೆ ರೈಲಿನಲ್ಲಿ ಮಹಿಳೆ ಪ್ರಯಾಣ

ರೈಲಿನಲ್ಲಿ ಆಗಾಗ ಬೀದಿ ನಾಯಿಗಳು ಟ್ರಾವೆಲ್​ ಮಾಡೋ ವಿಡಿಯೋ ನೀವು ನೋಡಿಯೇ ಇರ್ತೀರಿ. ಆದರೆ ಇದೀಗ ಮಹಿಳಾ ಪ್ರಯಾಣಿಕೆಯೊಬ್ಬರು ಮೇಕೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರೋ ವಿಡಿಯೋದಲ್ಲಿ ರೈಲಿನ ಟಿಕೆಟ್​ ಕಲೆಕ್ಟರ್​ ಮೇಕೆಗೆ ಟಿಕೆಟ್​ ತೆಗೆದುಕೊಂಡಿದ್ದೀರೇ ಎಂದು ಮಹಿಳೆಯನ್ನು ಪ್ರಶ್ನಿಸುತ್ತಿರೋದನ್ನ ಕಾಣಬಹುದಾಗಿದೆ. ಆದರೆ ಮಹಿಳೆಯು ಮೇಕೆಯ ಟಿಕೆಟ್​ನ್ನು ಟಿಸಿಗೆ ತೋರಿಸಿದ್ದು ಇದನ್ನು ನೋಡಿದ ರೈಲ್ವೆ ಅಧಿಕಾರಿ ಶಾಕ್​ ಆಗಿದ್ದಾರೆ.

ನಿಮ್ಮ ಹಾಗೂ ನಿಮ್ಮ ಮೇಕೆಯ ಟಿಕೆಟ್​ ನೀಡಿ ಎಂದು ಐಆರ್​ಸಿಟಿಸಿ ಅಧಿಕಾರಿ ಹೇಳುತ್ತಿದ್ದಂತೆಯೇ ಮಹಿಳೆಯು ಟಿಕೆಟ್​ನ್ನು ತೋರಿಸುತ್ತಾರೆ. ಟಿಕೆಟ್​ನಲ್ಲಿ ಮೂವರು ಪ್ರಯಾಣಿಕರ ಪಟ್ಟಿಯನ್ನು ನೋಡಬಹುದಾಗಿದೆ. ಮಹಿಳೆ, ತನ್ನ ಪತಿ ಹಾಗೂ ಮೇಕೆಯ ಟಿಕೆಟ್​ನ್ನು ಅಧಿಕಾರಿಗೆ ತೋರಿಸಿದ್ದಾರೆ. ಅಲ್ಲದೇ ಅಧಿಕಾರಿಯ ಕಡೆಗೆ ನಗೆ ಬೀರುತ್ತಾ ನನ್ನ ಬಳಿ ನನ್ನ ಮೇಕೆಯ ಟಿಕೆಟ್​ ಕೂಡ ಇದೆ ಎಂದು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಆ ಮಹಿಳೆಯ ಪಾಲಿಗೆ ಮೇಕೆ ಕೇವಲ ಪ್ರಾಣಿಯಲ್ಲ. ಅದು ಆಕೆಯ ಕುಟುಂಬದ ಒಂದು ಭಾಗವಾಗಿರುವಂತೆ ಕಾಣುತ್ತಿದೆ. ಕುಟುಂಬ ಸದಸ್ಯರನ್ನು ನೋಡಿಕೊಂಡಂತೆ ಆಕೆ ಮೇಕೆಯನ್ನು ನೋಡಿಕೊಂಡಿದ್ದಾರೆ. ಈ ಮಹಿಳೆಯಿಂದ ಸಮಾಜ ಕಲಿಯಬೇಕಾಗಿರೋದು ತುಂಬಾನೇ ಇದೆ ಅಂತಾ ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ. ಅಂದಹಾಗೆ ಈ ವಿಡಿಯೋ ನೋಡಿ ನಿಮಗೆ ಏನು ಅನ್ನಿಸಿತು..?

https://twitter.com/i/status/1699047288033947880

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read