ಹೆಚ್ಚಿನ ಪ್ರದೇಶಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಪ್ರಾರಂಭವಾಗಿದೆ ಮತ್ತು ಕೆಲವರು ಮಕ್ಕಳ ನೀರಿನ ಪಿಸ್ತೂಲ್‌ಗಳನ್ನು ತೆಗೆದುಕೊಂಡು ಬಣ್ಣ ಎರಚುತ್ತಿದ್ದಾರೆ.
ಪಾಕಿಸ್ತಾನವು ಹೋಳಿಯನ್ನು ಆಚರಿಸುತ್ತಿರುವ ದೃಶ್ಯಗಳನ್ನು ಸೆರೆಹಿಡಿಯುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪಾಕಿಸ್ತಾನ ಮೂಲದ ದಿಲೀಪ್ ಕುಮಾರ್ ಖತ್ರಿ ಎಂಬ ಪತ್ರಕರ್ತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟ್‌ನಲ್ಲಿ, “ಪ್ರೀತಿಯ ದೇಶ ಪಾಕಿಸ್ತಾನ” ಎಂದು ಬರೆದುಕೊಂಡಿದ್ದು, ನಾವು ನಮ್ಮ ಹಬ್ಬಗಳನ್ನು ಹೀಗೆ ಆಚರಿಸುತ್ತಿದ್ದೇವೆ ಎಂದಿದ್ದಾರೆ.
ವಿಡಿಯೋದಲ್ಲಿ ಪಾಕಿಗಳು ಹಬ್ಬ ಆಚರಿಸುವುದನ್ನು ನೋಡಬಹುದಾಗಿದೆ. ಇವರು ಗಾಳಿಯಲ್ಲಿ ಗುಲಾಲನ್ನು ಚಿಮುಕಿಸುವುದರ ನಡುವೆ ಜನರು ದಾಂಡಿಯಾ ರಾಸ್ ಆನಂದಿಸುತ್ತಿದ್ದಾರೆ. ಸಂಗೀತ, ನೃತ್ಯ ಮತ್ತು ಸುತ್ತಲೂ ಬಣ್ಣಗಳೊಂದಿಗೆ, ಪಾಕಿಸ್ತಾನದ ಜನರು ಹೋಳಿ ಮೂಡ್ ನಲ್ಲಿ ಇರುವುದನ್ನು ನೋಡಬಹುದು.