ಉಕ್ರೇನ್ ಅಧ್ಯಕ್ಷರಿಗೆ ತಮ್ಮ ತಾಯಿ ತಯಾರಿಸಿದ ಬರ್ಫಿ ನೀಡಿದ ಬ್ರಿಟನ್ ಪ್ರಧಾನಿ….!

ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರ ತಾಯಿ ತಯಾರಿಸಿದ ಕೆಲವು ಭಾರತೀಯ ಸಿಹಿತಿಂಡಿಗಳನ್ನು ನೀಡಿದ್ದಾರೆ. ರಿಷಿ ಸುನಕ್ ಅವರು ಝೆಲೆನ್ಸ್ಕಿಯವರ ಪ್ಲೇಟ್ ಗೆ ಬರ್ಫಿ ಹಾಕಿದ್ದು ಆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ರಿಷಿ ಸುನಕ್ ಈ ವಿಡಿಯೋನ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರು ನಾಯಕರು ಕೆಲವು ರುಚಿಕರವಾದ ಆಹಾರವನ್ನ ಒಟ್ಟಿಗೆ ಸವಿಯುತ್ತಾ ಸಮಯ ಕಳೆಯುವುದನ್ನು ತೋರಿಸಿದೆ. ತಮ್ಮ ತಾಯಿ ತಯಾರಿಸಿದ ಬರ್ಫಿ ನೀಡಿದ್ದಾಗಿ ರಿಷಿ ಸುನಕ್ ಹೇಳಿದ್ದಾರೆ. ಅದನ್ನು ಝೆಲೆನ್ಸ್ಕಿ ಆನಂದಿಸಿರುವುದನ್ನ ವಿಡಿಯೋದಲ್ಲಿ ಕಾಣಬಹುದು.

ಅಧ್ಯಕ್ಷ ಝೆಲೆನ್ಸ್ಕಿ ಅವರು ಮೇ 2023 ರಲ್ಲಿ ಯುರೋಪಿಯನ್ ಪ್ರವಾಸದ ಸಮಯದಲ್ಲಿ ಬ್ರಿಟನ್ ಗೆ ಅನಿರೀಕ್ಷಿತ ಭೇಟಿ ನೀಡಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಭುಗಿಲೆದ್ದ ನಂತರ ಈ ಪ್ರದೇಶಕ್ಕೆ ಇದು ಅವರ ಎರಡನೇ ಪ್ರವಾಸವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read