ಹೋಳಿ ನೆಪದಲ್ಲಿ ಜಪಾನಿ ಯುವತಿ ಮೇಲೆ ದೆಹಲಿ ಯುವಕರಿಂದ ಅಸಭ್ಯ ವರ್ತನೆ

ನವದೆಹಲಿ: ಹೋಳಿ ಸಮಯದಲ್ಲಿ ದೆಹಲಿಯ ಬೀದಿಗಳಲ್ಲಿ ಜಪಾನಿನ ವ್ಲಾಗರ್‌ ಯುವತಿಯೊಬ್ಬಳಿಗೆ ಅಸಹ್ಯ ರೀತಿಯಲ್ಲಿ ಕಿರುಕುಳ ನೀಡುವ ವಿಡಿಯೋ ಒಂದು ವೈರಲ್​ ಆಗಿದೆ. ‘ಆಸ್ಕ್ ಆಬ್ರಿ’ ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.

ದೆಹಲಿಯಲ್ಲಿ ಹುಡುಗರ ಗುಂಪೊಂದು 22 ವರ್ಷದ ವ್ಲಾಗರ್‌ಗೆ ಮೊಟ್ಟೆ, ಕಪಾಳಮೋಕ್ಷ ಮತ್ತು ಕಿರುಕುಳ ನೀಡುವುದನ್ನು ವಿಡಿಯೋದಲ್ಲಿ ನೋಡಬಹುದು.

ವೀಡಿಯೊದಲ್ಲಿ, ಗುಂಪೊಂದು ಯುವತಿಯನ್ನು ಸುತ್ತುವರೆದಿರುವುದನ್ನು ಕಾಣಬಹುದು. ಆಕೆಯ ಮೇಲೆ ಕಲರ್ ಪೇಸ್ಟ್‌ ಸಿಡಿಸುತ್ತಾರೆ. ಯುವತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವಳ ಬೆನ್ನಿನ ಮೇಲೆ ಮೊಟ್ಟೆಯನ್ನು ಒಡೆಯುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ದೆಹಲಿ ಪೊಲೀಸರು ವಿಡಿಯೋವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ವಿವರಗಳಿಗಾಗಿ ರಾಯಭಾರ ಕಚೇರಿಗೆ ಇಮೇಲ್ ಕಳುಹಿಸಲಾಗಿದೆ ಮತ್ತು ವೀಡಿಯೊದಲ್ಲಿ ಕಂಡುಬರುವ ಪುರುಷರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read