alex Certify ಪಟಾಕಿ ಮೇಲೆ ಲೋಹದ ಪಾತ್ರೆ: ಬಾಲಕಿ ಆಟದ ಕುತೂಹಲಕಾರಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಟಾಕಿ ಮೇಲೆ ಲೋಹದ ಪಾತ್ರೆ: ಬಾಲಕಿ ಆಟದ ಕುತೂಹಲಕಾರಿ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸ್ಫೂರ್ತಿದಾಯಕ, ಶೈಕ್ಷಣಿಕ ಮತ್ತು ಮನರಂಜನೆಯಿಂದ ಹಿಡಿದು ತಮಾಷೆಯವರೆಗಿನ ವಿವಿಧ ವಿಡಿಯೋಗಳಿಂದ ತುಂಬಿಹೋಗಿದೆ. ಇವುಗಳ ಪೈಕಿ ಕೆಲವೊಂದು ವೈರಲ್​ ಆಗುತ್ತವೆ. ಕೆಲವರು ವಿಭಿನ್ನ ರೀತಿಯ ಪೋಸ್ಟ್​ಗಳನ್ನು ಮಾಡಿ ಜನರ ಗಮನ ಸೆಳೆಯಲು ಬಯಸುತ್ತಾರೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ಈಗ ವೈರಲ್​ ಆಗಿದೆ.

ಇದು ಚಿಕ್ಕ ಹುಡುಗಿಯ ವಿಡಿಯೋ. ಸುಮಾರು 12-13 ವರ್ಷ ವಯಸ್ಸಿನ ಬಾಲಕಿಯೊಬ್ಬಳು ನೆಲದ ಮೇಲೆ ಇರಿಸಲಾದ ಪಟಾಕಿಗೆ ಬೆಂಕಿ ಹಚ್ಚಿ ತಕ್ಷಣವೇ ಲೋಹದ ಪಾತ್ರೆಯನ್ನು ಅದರ ಮೇಲೆ ಇರಿಸಿ ಓಡಿಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಕ್ಷಣಾರ್ಧದಲ್ಲಿ ಪಟಾಕಿ ಸ್ಫೋಟಿಸುತ್ತದೆ. ಪಾತ್ರೆಯು ಗಾಳಿಯಲ್ಲಿ ಎತ್ತರಕ್ಕೆ ಹಾರುತ್ತದೆ. ಮೇಲೆ ಹಾರಿರುವುದು ಕ್ಯಾಮೆರಾದ ಕಣ್ಣಿಗೆ ಕಾಣಿಸಿಲ್ಲ.

ಈ ಪಾತ್ರ ಓವರ್​ಹೆಡ್​ ಹೈ-ವೋಲ್ಟೇಜ್ ವಿದ್ಯುತ್ ಕೇಬಲ್​ಗೆ ಸಿಲುಕಿಕೊಳ್ಳುತ್ತದೆ. ಇದು ನೋಡಲು ಕುತೂಹಲ ಎನಿಸಿದರೂ ಅಷ್ಟೇ ಡೇಂಜರ್​ ಕೂಡ. ಆ ಕ್ಷಣಾರ್ಧದಲ್ಲಿ ಓಡಿಹೋಗದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ, ಇಂಥ ಅಪಾಯಕಾರಿ ಆಟಗಳನ್ನು ಆಡಬೇಡಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಇನ್ನು ಕೆಲವರು ಹೈ ವೋಲ್ಟೇಜ್​ ವೈಯರ್​ಗೆ ತಗುಲಿರುವುದು ಕೂಡ ಅಪಾಯಕಾರಿಯೆ. ಇಂಥ ಆಟಗಳನ್ನು ಬಯಲು ಪ್ರದೇಶಗಳಲ್ಲಿ ಆಡಿದರೆ ಉತ್ತಮ ಎಂದಿದ್ದಾರೆ. ಇನ್ನು ಕೆಲವರು ಹುಡುಗಿ ಆಟವನ್ನು ಮೆಚ್ಚಿಕೊಂಡಿದ್ದಾರೆ.

https://youtu.be/8ehOtswEf54

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...