
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ (ಈ ಹಿಂದಿನ ಟ್ವಿಟರ್) @memeschor ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ರಿಚಾರ್ಜ್ ಈಗ ದುಬಾರಿಯಲ್ಲ’ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ವಿಡಿಯೋದಲ್ಲಿ ಕಂಡುಬರುವಂತೆ ಯುವತಿಯೊಬ್ಬಳು ‘ಶೀಲಾ ಕೀ ಜವಾನಿ’ ಹಾಡಿಗೆ ಸ್ಟೆಪ್ ಹಾಕಲು ಸಿದ್ದಳಾಗಿದ್ದು, ಇತರೆ ಡಾನ್ಸರ್ ಗಳು ಇದನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಯುವತಿ ಡಾನ್ಸ್ ಮಾಡಲು ಆರಂಭಿಸುತ್ತಿದ್ದಂತೆ ಅಲ್ಲಿ ನೆರೆದಿದ್ದವರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿ ನೂರಾರು ಮಂದಿ ಶೇರ್ ಮಾಡಿರುವುದಲ್ಲದೆ ಸಾವಿರಾರು ಮಂದಿ ಮೆಚ್ಚುಗೆಯ ಕಮೆಂಟ್ ಗಳನ್ನು ಹಾಕಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಓರ್ವ ಬಳಕೆದಾರ, ‘ಫುಲ್ ಪೈಸಾ ವಸೂಲಿ’ ಎಂದರೆ ಮತ್ತೋರ್ವ ಬಳಕೆದಾರ, ನನ್ನ ಇಂದಿನ ದಿನ ಸಾರ್ಥಕವಾಯಿತು ಎಂದಿದ್ದಾನೆ. ನೀವೂ ಕೂಡ ಈ ವಿಡಿಯೋ ವೀಕ್ಷಿಸಿ ನಿಮ್ಮ ಅನಿಸಿಕೆಯನ್ನು ಹೇಳಿ.