ಐದು ಅಂತಸ್ತಿನ ಕಟ್ಟಡವೊಂದು ಅಪಾಯಕಾರಿಯಾಗಿ ಒಂದು ಬದಿಗೆ ವಾಲಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕಟ್ಟಡ ಏಕಾಏಕಿ ಎಡಕ್ಕೆ ವಾಲಿದ್ದು, ನಿವಾಸಿಗಳು ಆತಂಕದ ಸ್ಥಿತಿಗೆ ತಲುಪಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ವಾಲುವಿಕೆ ಅದರ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ, ಒಬ್ಬ ವ್ಯಕ್ತಿ ಮೂರನೇ ಮಹಡಿಯಿಂದ ಜಿಗಿದು ಕಟ್ಟಡದಿಂದ ಹೊರಗೆ ಓಡಿಹೋದ ನಂತರ, ಭಯಭೀತರಾದ ಇತರ ನಿವಾಸಿಗಳು ನಿವಾಸದಿಂದ ಹೊರಬಂದು ರಾತ್ರಿಯನ್ನು ಬಯಲಿನಲ್ಲಿ ಕಳೆಯಬೇಕಾಯಿತು.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಮಂಗಳವಾರ ರಾತ್ರಿ 50 ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಿದೆ. ಬುಧವಾರ ಸಂಜೆ ವೇಳೆಗೆ ಕಟ್ಟಡ ಕೆಡವುವ ಕಾರ್ಯ ಪೂರ್ಣಗೊಂಡಿದೆ.
ಪಕ್ಕದ ಪ್ಲಾಟ್ ನಿರ್ಮಾಣದ ವೇಳೆ ಪಾಯ ಸಾಕಷ್ಟು ಆಳ ತೆಗೆದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಲ್ಲಿ ಕೆಲಸ ಮಾಡುತ್ತಿರುವ ಬಿಲ್ಡರ್ ಶ್ರೀನು ಅವರು ಬಾಡಿಗೆದಾರರಿಗೆ ಅವರ ನಷ್ಟಕ್ಕೆ ಪರಿಹಾರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯ (ಸೆಕ್ಷನ್ 125) ಮತ್ತು ಕಿಡಿಗೇಡಿತನ (ಸೆಕ್ಷನ್ 324) ಸೇರಿದಂತೆ ಅವರ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಲಾಗಿದೆ.
Builder Booked as Gachibowli Building Tilt Sparks Panic and Demolition in Hyderabad
The Madhapur police have registered a case against builder Srinu, also known as Kalvakolu Srinu, after a four-storey building in Gachibowli’s Siddiqui Nagar tilted dangerously on Tuesday night,… pic.twitter.com/9eKafaTPjz
— Sudhakar Udumula (@sudhakarudumula) November 20, 2024