ಅತ್ಯಂತ ಉದ್ದನೆಯ ಗಡ್ಡ ಬಿಟ್ಟಿರುವ ಪುರುಷ ಎಂಬ ಗಿನ್ನೆಸ್ ದಾಖಲೆ ಹೊಂದಿರುವ ಸಿಖ್ ವ್ಯಕ್ತಿಯೊಬ್ಬರು ಇದೀಗ ತಮ್ಮದೇ ದಾಖಲೆ ಮುರಿದಿದ್ದಾರೆ. ಸರ್ವಣ್ ಸಿಂಗ್ ಎಂಬ ಇವರು ಈ ದಾಖಲೆಯನ್ನು 2008ರಲ್ಲಿ ಮೊದಲು ಸೃಷ್ಟಿಸಿದ್ದರು.
ಆ ವೇಳೆ ಸರ್ವಣ್ ಸಿಂಗ್‌ರ ಗಡ್ಡ 7 ಅಡಿ 8 ಇಂಚು ಉದ್ದವಿತ್ತು. 2010ರಲ್ಲಿ ಇದೇ ಗಡ್ಡ 8 ಅಡಿ 2.5 ಇಂಚು ಉದ್ದವಿತ್ತು. ಬ್ರಿಟಿಷ್ ಕೊಲಂಬಿಯಾದ ಸರ‍್ರೆಯವರಾದ ಸರ್ವಣ್‌ರ ಗಡ್ಡವೀಗ 8 ಅಡಿ 3 ಇಂಚು ಉದ್ದವಾಗಿದೆ.
ಸರ್ವಣ್ ಅವರು ತಮ್ಮ 17ನೇ ವಯಸ್ಸಿನಿಂದ ಗಡ್ಡವನ್ನು ಬೆಳೆಸುತ್ತಾ ಬಂದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಮಾಹಿತಿ ತಿಳಿಸುತ್ತದೆ.
ಸಿಖ್ ಸಮುದಾಯದ ಹೆಮ್ಮೆಯ ಸೂಚಕವಾದ ತಮ್ಮ ಗಡ್ಡವನ್ನು ತಾವು ಎಂದಿಗೂ ಟ್ರಿಮ್ ಮಾಡುವುದಿಲ್ಲ ಎಂದು ಹೇಳುತ್ತಾರೆ ಸರ್ವಣ್. ಇವರ ಗಡ್ಡವನ್ನು ಅಳೆಯುವ ವೇಳೆ ಕೂದಲುಗಳನ್ನು ಒದ್ದೆ ಮಾಡುವ ಮೂಲಕ ಅವುಗಳು ಸಂಪೂರ್ಣವಾಗಿ ಉದ್ದವಿರುವುದನ್ನು ಖಾತ್ರಿ ಪಡಿಸಲಾಗುತ್ತದೆ. ತಮ್ಮ ಗಡ್ಡಕ್ಕೆಂದೇ ಸರ್ವಣ್ ಅವರು ವಿಶೇಷವಾದ ಆರೈಕೆ ಮಾಡುತ್ತಾ ಬಂದಿದ್ದು, ಶಾಂಪೂ ಹಾಗೂ ಕಂಡೀಷನರ್‌ಗಳನ್ನು ಬಳಸಿ ಅವುಗಳನ್ನು ಜತನದಿಂದ ನೋಡಿಕೊಂಡು ಬರುತ್ತಿದ್ದಾರೆ.