ಮದ್ಯದಂಗಡಿ ಮುಂದೆ ಖೈದಿಯೊಂದಿಗೆ ನಿಂತ ಪೊಲೀಸ್: ಫೋಟೋ ವೈರಲ್

Khoob jamegi jab...': UP police takes prisoner liquor shopping, viral photo of criminal buying liquor with policeman in hamirpur uttar pradesh

ಹಮೀರ್‌ಪುರ: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಖೈದಿಯೊಂದಿಗೆ ಮದ್ಯದಂಗಡಿಯಲ್ಲಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪರಾಧಿಯೊಂದಿಗೆ ಪೊಲೀಸ್ ಮದ್ಯದಂಗಡಿಯಲ್ಲಿರುವ ದೃಶ್ಯ ಇದೀಗ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹಮೀರ್‌ಪುರ ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಖೈದಿಯೊಂದಿಗಿರುವ ಪೊಲೀಸ್ ಅಧಿಕಾರಿಯು ಕುರಾರಾ ಪ್ರದೇಶದ ಪಿಎಸ್‌ನ ವ್ಯಾಪ್ತಿಗೆ ಬರುವ ಹಮೀರ್‌ಪುರದವರು ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ಚಿತ್ರದಲ್ಲಿ, ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿ ಅಧಿಕಾರಿ ಹಿಡಿದಿದ್ದಾರೆ. ಅಪರಾಧಿ/ವಿಚಾರಣೆಯ ಖೈದಿಯು ಅವನ ಹಿಂದೆ ನೋಡುತ್ತಿರುವಾಗ ಪೊಲೀಸ್ ಅಧಿಕಾರಿ ಅವನನ್ನು ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಇಬ್ಬರೂ ಹಮೀರ್‌ಪುರ ನಂ.3 ಕಿಂಗ್‌ರೋಡ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಂತಿದ್ದರು. ಸದ್ಯ, ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read