ಸಾಮಾಜಿಕ ಜಾಲತಾಣದಲ್ಲಿ ಏನಾದರೂ ವಿಚಿತ್ರವಾದದ್ದನ್ನ ಮಾಡಿ ಖ್ಯಾತಿ ಪಡೆಯುವುದು ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಫುಡ್ ವಿಡಿಯೋಗಳ ಮೂಲಕ ವೈರಲ್ ಆಗಲೆಂದು ಚಾಕ್ಲೆಟ್ ಆಮ್ಲೆಟ್, ಓರಿಯೋ ಮ್ಯಾಗಿ, ಮಟ್ಕಾ ದೋಸೆಯಂಥ ವಿಚಿತ್ರ ಕಂಟೆಂಟ್‌ಗಳನ್ನೆಲ್ಲಾ ಮಾಡುವವರನ್ನು ಕಂಡಿದ್ದೇವೆ.
ಬೀದಿ ಬದಿಯ ವರ್ತಕರು ಸಹ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆಯುವ ಭರದಲ್ಲಿ ಏನೇನೋ ಮಾಡಲು ಆರಂಭಿಸಿದ್ದಾರೆ. ದೆಹಲಿಯ ಬೀದಿ ಬದಿಯ ಆಹಾರ ವರ್ತಕರೊಬ್ಬರು ಇದೀಗ ಚೌಮೀನ್ ಆಮ್ಲೆಟ್ ಎಂಬ ಹೊಸ ರೆಸಿಪಿ ಕಂಡು ಹಿಡಿದಿದ್ದು, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಗಿರಾಕಿಗಳಿಗೆ ಕೊಡುತ್ತಿದ್ದಾರೆ.
ಮಾದಲಿಗೆ ಮೊಟ್ಟೆಯೊಡೆದು ತವದ ಮೇಲೆ ಆಮ್ಲೆಟ್ ಹಾಕಿ, ಅದರ ಮೇಲೆ ತರಕಾರಿ ಹಾಗೂ ಮಸಾಲೆ ಉದುರಿಸಿ, ಅದರ ಮೇಲೆ ಚೌಮೀನ್, ಟೊಮ್ಯಾಟೋ, ಮೊಟ್ಟೆ ಹಾಗೂ ಮಸಾಲೆಯನ್ನು ಹಾಕುವ ಈ ವಿಚಿತ್ರ ತಯಾರಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಚೌಮೀನ್ ಆಮ್ಲೆಟ್‌ನ ವಿಡಿಯೋವನ್ನು ಫುಡ್ ಬ್ಲಾಗರ್ ರತಜ್ ಉಪಾಧ್ಯಾಯ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ. “ನನಗೀಗ ಅರಿವಾಗುತ್ತಿದೆ ಹೊಟ್ಟೆಯಲ್ಲಿ ಅಲ್ಸರ್‌ಗಳು ಎಲ್ಲಿಂದ ಬಂದವೆಂದು,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, “ಇದನ್ನು ನೋಡಲಾಗುತ್ತಿಲ್ಲ, ನನ್ನ ಹೊಟ್ಟೆ ಬಹಳ ದುರ್ಬಲವಾಗಿದೆ, ದೇವರೇ ಕರುಣೆ ತೋರಿಸು,” ಎಂದು ಮತ್ತೊಬ್ಬರು ಹೇಳಿದ್ದಾರೆ.
https://youtu.be/A6Qta1f06FI