ನವದೆಹಲಿ: ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬೋರ್ಡ್ ಅನ್ನು ಪುನರ್ ರಚಿಸಿದ ನಂತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ್ದಾರೆ.
ಪೇಟಿಎಂನ ಮೂಲ ಕಂಪನಿಯಾದ ಒನ್ 97 ಕಮ್ಯುನಿಕೇಷನ್, ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್(ಪಿಪಿಬಿಎಲ್) ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಎಕ್ಸ್ ಚೇಂಜ್‌ಗಳಿಗೆ ಮಾಹಿತಿ ನೀಡಿದೆ.
One 97 Communications Ltd(OCL) ಪ್ರಕಾರ, ವಿಜಯ್ ಶೇಖರ್ ಶರ್ಮಾ ಅವರು ಪರಿವರ್ತನೆ ಸಕ್ರಿಯಗೊಳಿಸಲು ಅರೆಕಾಲಿಕ ನಾನ್-ಎಕ್ಸಿಕ್ಯೂಟಿವ್ ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯರಾಗಿ ಕೆಳಗಿಳಿದ್ದಾರೆ ಎಂದು Paytm ನ ಮೂಲ ಸಂಸ್ಥೆ ತಿಳಿಸಿದೆ.
ಮಾರ್ಚ್ 15 ರೊಳಗೆ ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳಲ್ಲಿ ಹೆಚ್ಚಿನ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ನಿಲ್ಲಿಸುವಂತೆ ಆರ್‌ಬಿಐ ಪಿಪಿಬಿಎಲ್‌ಗೆ ಸೂಚಿಸಿದ ನಂತರ ಕೆಲವು ಮಾನದಂಡಗಳನ್ನು ಅನುಸರಿಸದಿರುವುದು ಶರ್ಮಾ ಅವರ ರಾಜೀನಾಮೆ ನಿರ್ಧಾರಕ್ಕೆ ಕಾರಣವಾಗಿದೆ.