ಬೆಂಗಳೂರು : ವಿಧಾನಸೌಧಕ್ಕೆ ಇತ್ತೀಚೆಗೆ ‘ಅನಾಮಿಕ ವ್ಯಕ್ತಿ’ ಎಂಟ್ರಿ ಬೆನ್ನಲ್ಲೇ ವಿಧಾನಸೌಧದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ ನಡೆದಿದ್ದು, ವಿಧಾನಸೌಧಕ್ಕೆ ಅನಾಮಿಕ ವ್ಯಕ್ತಿಯೊಬ್ಬ ಪ್ರವೇಶಿಸಿ ಸುಮಾರು 15 ನಿಮಿಷ ಕುಳಿತ ಘಟನೆ ವರದಿಯಾಗಿತ್ತು.ಈ ಬೆನ್ನಲ್ಲೇ ವಿಧಾನಸೌಧದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಸರಿಯಾದ ದಾಖಲಾತಿ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲು ಪೋಲೀಸರು ಮುಂದಾಗಿದ್ದಾರೆ
ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ ನಡೆದಿದ್ದು, ವಿಧಾನಸೌಧಕ್ಕೆ ಅನಾಮಿಕ ವ್ಯಕ್ತಿಯೊಬ್ಬ ಪ್ರವೇಶಿಸಿ ಸುಮಾರು 15 ನಿಮಿಷ ಕುಳಿತ ಘಟನೆ ವರದಿಯಾಗಿತ್ತುಶಾಸಕರ ಜಾಗದಲ್ಲಿ ಅನಾಮಿಕ ವ್ಯಕ್ತಿ ಕುಳಿತಿದ್ದು, ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್ ಗಮನಕ್ಕೆ ತಂದಿದ್ದರು. ಶಾಸಕರಲ್ಲದ ಅನಾಮಿಕ ವ್ಯಕ್ತಿ ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದರು. ಒಬ್ಬ ವ್ಯಕ್ತಿ ಬಂದು ಸದನಲ್ಲಿ 15 ನಿಮಿಷ ಕುಳಿತಿದ್ದು, ಆತ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾನೆ , ನಂತರ 15 ನಿಮಿಷದಲ್ಲಿ ಆತ ನಾಪತ್ತೆಯಾಗಿದ್ದನು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು.
ಇಂದು ತಪಾಸಣೆ ನಡೆಸುವಾಗ ಮಹಿಳೆಯೊಬ್ಬರ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದ್ದು, ಮಹಿಳೆಯನ್ನು ವಾಪಸ್ ಕಳುಹಿಸಲಾಗಿದೆ. ವಿಧಾನಸೌಧದ ಪೂರ್ವ ಗೇಟ್ ನಲ್ಲಿ ಮಹಿಳೆಯ ಬ್ಯಾಗ್ ಸ್ಕ್ಯಾನಿಂಗ್ ಮಾಡುವ ವೇಳೆ ಚಾಕು ಪತ್ತೆಯಾಗಿದೆ.