ಶತಮಾನದ ಹಿಂದೆ ಮುಳುಗಿದ ಟೈಟಾನಿಕ್ ಹಡಗಿನ ಅವಶೇಷಗಳತ್ತ ಸಾಗಿ ಅಧ್ಯಯನ ನಡೆಸಲೆಂದು ತೆರಳಿದ್ದ ಟೈಟಾನ್ ಹೆಸರಿನ ಜಲಾಂತರ್ಗಾಮಿ ವಾಹನ ಮುಳುಗಿಹೋಗಿದೆ. ಅದರಲ್ಲಿದ್ದ ಐವರೂ ಕೂಡಾ ಸಾವನ್ನಪ್ಪಿದ್ದಾರೆ.
ಜೂನ್ 18ರಂದು ’ಪೋಲಾರ್ ಪ್ರಿನ್ಸ್’ ಎಂಬ ನೌಕೆಯಿಂದ ಬಿಟ್ಟ 1 ಗಂಟೆ 45 ನಿಮಿಷಗಳ ಒಳಗೆ ಈ ಜಲಾಂತರ್ಗಾಮಿ ಸಂಪರ್ಕದಿಂದ ದೂರ ಸಾಗಿದೆ. ಪೋಲಾರ್ ಪ್ರಿನ್ಸ್‌ನಲ್ಲಿದ್ದ ನಿಯಂತ್ರಣ ಕೊಠಡಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಪಿಂಗ್ ಮಾಡುತ್ತಿದ್ದ ಟೈಟಾನ್, ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಬರುತ್ತಲೇ, ಮದ್ಯಾಹ್ನ 3 ಗಂಟೆ ವೇಳೆಗೆ, ಪೋಲಾರ್ ಪ್ರಿನ್ಸ್‌ನೊಂದಿಗೆ ಸಂಪರ್ಕ ಕಳೆದುಕೊಂಡಿದೆ.
ಅಬ್ಬಿ ಜಾಕ್ಸನ್ ಹೆಸರಿನ ಟಿಕ್‌ಟಾಕರ್ ಒಬ್ಬಾಕೆ ಟೈಟಾನ್ ಜಲಾಂತರ್ಗಾಮಿಯು ಟೈಟಾನಿಕ್ ಮುಳುಗಿರುವ ಸ್ಥಳದತ್ತ ತೆರಳಲು ಆರಂಭಿಸುತ್ತಲೇ ವಿಡಿಯೋವೊಂದನ್ನು ಶೂಟ್ ಮಡಿಕೊಂಡು ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ಈ ಜಲಾಂತರ್ಗಾಮಿಯಲ್ಲಿ ಐದು ಪ್ರಯಾಣಿಕರಿದ್ದರು. ಈ ಅಧ್ಯಯನಕ್ಕೆ ಮುಂದಾಗಿದ್ದ ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ಸ್‌ನ ಸಿಇಓ ಸ್ಟಾಕ್ಟನ್ ರಶ್, ಬ್ರಿಟನ್‌ನ ಹ್ಯಾಮಿಶ್ ಹಾರ್ಡಿಂಗ್, ಫ್ರೆಂಚ್ ಚಾಲಕ ಪೌಲ್ ಹೆನ್ರಿ ನಾರ್ಗೆಲೆಟ್ ಮತ್ತು ಪಾಕಿಸ್ತಾನದ ಉದ್ಯಮಿ ಶಾಜ಼ಾದಾ ದಾವೂದ್ ಹಾಗೂ ಆತನ ಪುತ್ರ ಸುಲೇಮಾನ್ ಈ ನತದೃಷ್ಟರು.
23,000 ಪೌಂಡ್‌ಗಳಷ್ಟು ತೂಕದ ಈ ಜಲಾಂತರ್ಗಾಮಿಯನ್ನ ಕಾರ್ಬನ್ಫ ಫೈಬರ್ ಹಾಗೂ ಟೈಟಾನಿಯಮ್‌ನಿಂದ ರಚಿಸಲಾಗಿತ್ತು.
https://twitter.com/iv_times/status/1671669727733641217?ref_src=twsrc%5Etfw%7Ctwcamp%5Etweetembed%7Ctwterm%5E1671669727733641217%7Ctwgr%5E0712a3ac9bcfa3814d6136fb382d8507ba45d11d%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-videographer-captures-moment-titan-submersible-began-its-doomed-voyage