ಪೊಲೀಸ್‌ ಅಧಿಕಾರಿಯನ್ನು ನೋಡುತ್ತಲೆ ಓಡೋಡಿ ಬಂದು ಸೆಲ್ಯೂಟ್ ಮಾಡಿದ ಪುಟ್ಟ ಬಾಲೆ; ಕ್ಯೂಟ್‌ ವಿಡಿಯೋ ವೈರಲ್

ಮಕ್ಕಳು ಮುಗ್ಧ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕೆಲಸವೂ ಬಲು ಮುದ್ದಾಗಿ ಕಾಣುತ್ತದೆ. ಎಂಥವರೇ ಆದರೂ, ಅವರು ಅದೆಂಥ ಪರಿಸ್ಥಿತಿಯಲ್ಲಿದ್ದರೂ ಮಕ್ಕಳ ಮುದ್ದುತನಕ್ಕೆ ಮಾರು ಹೋಗುತ್ತಾರೆ.

ಕೇರಳ ಪೊಲೀಸ್ ಇನ್‌ಸ್ಟಾಗ್ರಾಂನಲ್ಲಿ ಇಂಥದ್ದೊಂದು ವಿಡಿಯೋ ಪೋಸ್ಟ್ ಮಾಡಿದೆ. ಪುಟಾಣಿ ಬಾಲೆಯೊಬ್ಬಳು ಪೊಲೀಸ್ ಅಧಿಕಾರಿಯೊಬ್ಬರಿಗೆ ಸೆಲ್ಯೂಟ್ ಮಾಡುತ್ತಿರುವ ಈ ಮುದ್ದು ವಿಡಿಯೋ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.

ತನ್ನತ್ತ ಪುಟ್ಟ ಹೆಜ್ಜೆಗಳನ್ನು ಹಾಕಿಕೊಂಡು ಓಡಿ ಬರುವ ಈ ಪುಟಾಣಿ ಬಾಲೆಯನ್ನು ಕಂಡು ಸ್ಮೈಲ್ ಮಾಡುವ ಪೊಲೀಸ್ ಅಧಿಕಾರಿಗೆ ಆಕೆ ತನಗೆ ಸೆಲ್ಯೂಟ್ ಮಾಡಿದ್ದನ್ನು ನೋಡಿ ಇನ್ನಷ್ಟು ಸಂತಸವಾಗುತ್ತದೆ.

ಮುದ್ದು ಮಗುವಿನ ಈ ಗೌರವಕ್ಕೆ ಭಾವಪರವಶರಾದ ಪೊಲೀಸ್ ಅಧಿಕಾರಿ ಕೂಡಲೇ ಸೆಲ್ಯೂಟ್‌ ಅನ್ನು ಆಕೆಗೆ ಹಿಂದಿರುಗಿಸುತ್ತಾರೆ.

ಇನ್‌ಸ್ಟಾಗ್ರಾಂ ಬಳಕೆದಾರರು ಈ ಪೋಸ್ಟ್‌ ಬಗ್ಗೆ ಬರೆದಿದ್ದು, “ಇವಳು ನನ್ನ ಮಗಳು ನೇಹಾಕುಟ್ಟಿ. ಪೂವರ್‌ ಕೋಸ್ಟಲ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ ಬಿಜು ಸರ್‌ಗೆ ಹೀಗೆ ಸಲ್ಯೂಟ್ ಮಾಡುತ್ತಾಳೆ,” ಎಂದು ಮಲೆಯಾಳಂನಲ್ಲಿ ಬರೆದಿದ್ದಾರೆ.

https://youtu.be/f9Stk9W3CEc

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read