ರೈಲು ನಿಲ್ಲಿಸಿ ಕ್ರಾಸಿಂಗ್ ಗೇಟ್ ತೆರೆದ ಚಾಲಕ; ವಿಡಿಯೋ ‘ವೈರಲ್’……!

ರೈಲ್ವೆ ಸಚಿವಾಲಯ ರೈಲ್ವೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸ್ತಿದ್ದು, ಬಿಹಾರದ ಕೆಲ ಪ್ರದೇಶಗಳನ್ನು ನೋಡಿದ್ರೆ ಇದು ಸತ್ಯಕ್ಕೆ ದೂರವಾದ ಮಾತು ಎನ್ನಿಸುತ್ತಿದೆ. ಹೊಸ ತಂತ್ರಜ್ಞಾನವಿರಲಿ, ಬಿಹಾರದ ಕೆಲ ಪ್ರದೇಶಗಳಲ್ಲಿ ರೈಲ್ವೆ ಕ್ರಾಸಿಂಗ್‌ ತೆರೆಯಲು ಮತ್ತು ಮುಚ್ಚಲು ಪ್ರತ್ಯೇಕ ಸಿಬ್ಬಂದಿ ಕೂಡ ಇಲ್ಲ. ಈಗ  ಬಿಹಾರದ ಸಿವಾನ್ ಜಿಲ್ಲೆಯ ವಿಡಿಯೋ ಒಂದು ವೈರಲ್‌ ಆಗಿದೆ. ಇಲ್ಲಿ ರೈಲಿನ ಸಿಬ್ಬಂದಿಯೇ  ರೈಲ್ವೆ ಕ್ರಾಸಿಂಗ್ ಅನ್ನು ತೆರೆದು, ಮುಚ್ಚುವ ಕೆಲಸ ಮಾಡಬೇಕು.

ವೈರಲ್‌ ವಿಡಿಯೋದಲ್ಲಿ ರೈಲ್ವೆ ಕ್ರಾಸಿಂಗ್‌ ಗಿಂತ ಸ್ವಲ್ಪ ಹಿಂದೆ ರೈಲು ನಿಲ್ಲುತ್ತದೆ. ಆಗ ಕ್ರಾಸಿಂಗ್‌ ಗೇಟನ್ನು ರೈಲಿನಿಂದ ಇಳಿದು ಬರುವ ಸಿಬ್ಬಂದಿ ಮುಚ್ಚುತ್ತಾರೆ. ರೈಲು ಕ್ರಾಸಿಂಗ್‌ ಕ್ರಾಸ್‌ ಮಾಡಿ ಸ್ವಲ್ಪ ಮುಂದೆ ಹೋಗಿ ಮತ್ತೆ ನಿಲ್ಲುತ್ತದೆ. ಆಗ ರೈಲಿನಿಂದ ಇಳಿದುಬರುವ ಸಿಬ್ಬಂದಿ, ಕ್ರಾಸಿಂಗ್‌ ಗೇಟನ್ನು ತೆರೆದು, ಮತ್ತೆ ರೈಲು ಹತ್ತುತ್ತಾನೆ.

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಕ್ರಾಸಿಂಗ್ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಬಿಹಾರದ ವಿಶಿಷ್ಟ ವ್ಯವಸ್ಥೆಯಾಗಿದ್ದು, ರೈಲಿನ ಲೋಕೋ ಪೈಲಟ್ ಅಥವಾ ಗಾರ್ಡ್ ಖುದ್ದಾಗಿ ಗೇಟನ್ನು ತೆರೆಯುತ್ತಾರೆ ಮತ್ತು ಮುಚ್ಚುತ್ತಾರೆ. ಈ ಪದ್ಧತಿ ಹಲವು ವರ್ಷಗಳಿಂದ ನಡೆಯುತ್ತಿದೆ.

https://twitter.com/yoursurajnaik/status/1819050911953723620?ref_src=twsrc%5Etfw%7Ctwcamp%5Etweetembed%7Ctwterm%5E1819050911953723620%7Ctwgr%5Ea77bfa4d36a90d7a4950782ce6e2b64f45d5ddb5%7Ctwcon%5Es1_&ref_url=https%3A%2F%2Fwww.news18.com%2Fviral%2Fbizarre-video-shows-guard-stopping-train-to-manually-open-railway-crossing-gate-in-bihar-8990238.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read