ಮುಂಬೈನ ಟ್ರಾಫಿಕ್ ಸಿಗ್ನಲ್ ವೊಂದರಲ್ಲಿ ಸಂಭವಿಸಿದ ಅಪಘಾತದ ದೃಶ್ಯ ವೈರಲ್ ಆಗಿದ್ದು ಘಟನೆಯಲ್ಲಿ ತಪ್ಪು ಯಾರದ್ದು ಎಂಬುದರ ಚರ್ಚೆ ಹುಟ್ಟುಹಾಕಿದೆ.
ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿರುವ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿದೆ. ಬೈಕ್ ಸವಾರ ತಪ್ಪಾದ ದಿಕ್ಕಿನಲ್ಲಿ ಯುಟರ್ನ್ ತೆಗೆದುಕೊಂಡಿದ್ದಾರೆ. ಈ ವೇಳೆ ಸಿಗ್ನಲ್ ನಲ್ಲಿ ವೇಗವಾಗಿ ಬಂದ ಕಾರ್ ಬೈಕ್ ನ ಹಿಂಬದಿ ಭಾಗಕ್ಕೆ ಗುದ್ದಿತು. ಪರಿಣಾಮ ಬೈಕ್ ಸಮೇತ ಸವಾರ ರಸ್ತೆಯಲ್ಲಿ ಸ್ಕಿಡ್ ಆಗಿ ಕೆಳಗೆ ಬಿದ್ದರು.
ಟ್ವಿಟರ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡ ಮುಂಬೈನ ರೋಡ್ಸ್ ಖಾತೆದಾರರು “ನಮ್ಮ ದೇಶದಲ್ಲಿ ಟ್ರಾಫಿಕ್ ಪೊಲೀಸರ ಪ್ರಕಾರ ಇವರಲ್ಲಿ ಯಾರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕೆಲವರು “ಬೈಕರ್ ನನ್ನು ಬುಕ್ ಮಾಡಬೇಕು. ಕಾರಿನ ತಪ್ಪಲ್ಲ, ಬೈಕರ್ ಟರ್ನ್ ತೆಗೆದುಕೊಳ್ಳುವ ಮೊದಲು ಸರಿಯಾಗಿ ಗಮನಿಸಲಿಲ್ಲ ” ಎಂದಿದ್ದಾರೆ.
“ತಾತ್ತ್ವಿಕವಾಗಿ ಆ ಪ್ರದೇಶದ ಟ್ರಾಫಿಕ್ ಪೊಲೀಸರನ್ನು ಈ ಪ್ರಕರಣದಲ್ಲಿ ದಾಖಲಿಸಬೇಕು. ಅವರು ಸವಾರರು/ಚಾಲಕರ ಮೇಲೆ ಕಾನೂನಿನ ಭಯವನ್ನು ಹುಟ್ಟುಹಾಕಲು ವಿಫಲರಾಗುತ್ತಾರೆ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಟ್ರಾಫಿಕ್ ಪೊಲೀಸರು ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಮುಂದಿನ ಕ್ರಮಕ್ಕಾಗಿ ನಿಖರವಾದ ಸ್ಥಳದ ವಿವರಗಳನ್ನು ನೀಡಲು ನಾವು ನಿಮ್ಮನ್ನು ವಿನಂತಿಸುತ್ತೇವೆ” ಎಂದು ಹೇಳಿದ್ದಾರೆ.