2021 ರ ಚಲನಚಿತ್ರ ಪುಷ್ಪಾ: ದಿ ರೈಸ್‌ನ ಜನಪ್ರಿಯ ಸಾಮಿ ಸಾಮಿ ಹಾಡಿಗೆ ಇದಾಗಲೇ ಹಲವಾರು ಮಂದಿ ಸ್ಟೆಪ್ ಹಾಕಿದ್ದಾರೆ. ಆದರೆ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾಳೆ ಈ ಪುಟ್ಟ ಬಾಲಕಿ. ಶಾಲಾ ಬಾಲಕಿಯು ಶಕ್ತಿಯುತ ನೃತ್ಯ ಪ್ರದರ್ಶನ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಸಬಿತಾ ಚಂದ್ರ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 19 ಸೆಕೆಂಡುಗಳ ಕ್ಲಿಪ್‌ನಲ್ಲಿ, ಚಿಕ್ಕ ಹುಡುಗಿ ಶಾಲಾ ಸಮವಸ್ತ್ರದಲ್ಲಿ ಕಾಣಬಹುದಾಗಿದೆ. ಈಕೆ ಸಾಮಿ ಸಾಮಿ ಹಾಡಿಗೆ ಸ್ಟೆಪ್ ಹಾಕಿದ್ದು, ಅಲ್ಲಿದ್ದ ಆಕೆಯ ಸಹಪಾಠಿಗಳೂ ನರ್ತಿಸಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರು ಬಾಲಕಿಯ ನೃತ್ಯಕ್ಕೆ ಫಿದಾ ಆಗಿದ್ದಾರೆ. ಥರಹೇವಾರಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 34 ಸಾವಿರ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹುಡುಗಿಯ ಉತ್ಸಾಹಭರಿತ ಅಭಿನಯವು ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆದ್ದಿದೆ.