ಇವರ ಸ್ವಾಭಿಮಾನದ ಬದುಕಿಗೆ ನೀವೂ ಹೇಳಿ ಸಲಾಂ; ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ವ್ಯಕ್ತಿಯ ಮನಕಲಕುವ ‘ವಿಡಿಯೋ ವೈರಲ್’

ಇನ್ಸ್ಟಾಗ್ರಾಮ್‌ ನಲ್ಲಿ ಚಾಯ್‌ ವಾಲಾ ವಿಡಿಯೋ ವೈರಲ್‌ ಆಗಿದೆ. ರೈಲ್ವೆ ನಿಲ್ದಾಣದ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಚಾಯ್‌ ವಾಲಾನ ಶ್ರಮವನ್ನು ಜನರು ಮೆಚ್ಚಿದ್ದಾರೆ. ರೈಲಿನ ಕೋಚ್‌ ಹಿಂದೆ ಓಡುವ ಟೀ ಮಾರಾಟಗಾರ, ನಂತ್ರ ಟೀ ನೀಡಲು ವಿನೂತನ ವಿಧಾನ ಅನುರಿಸುತ್ತಾನೆ.

ವೈರಲ್‌ ವಿಡಿಯೋ ಪ್ರಕಾರ, ಮಧ್ಯ ವಯಸ್ಸಿನ ವ್ಯಕ್ತಿ ಟೀ ಮಾರಾಟ ಮಾಡುತ್ತಿದ್ದಾರೆ. ರೈಲು ಚಲಿಸುವ ಕಾರಣ ಒಂದು ಕೈನಲ್ಲಿ ಟೀ ಕಂಟೇನರ್‌ ಹಿಡಿದು ಇನ್ನೊಂದು ಕೈನಲ್ಲಿ ಟೀ ನೀಡುವುದು ಕಷ್ಟವಾಗುತ್ತದೆ. ಹಾಗಾಗಿ ರೈಲಿನ ಕೋಚ್‌ ಕಿಟಕಿಗೆ ಕಂಟೇನರ್‌ ನೇತುಹಾಕುವ ವ್ಯಕ್ತಿ, ನಂತ್ರ ಟ್ರೈನ್‌ ನಲ್ಲಿರುವ ಪ್ರಯಾಣಿಕರಿಗೆ ಟೀ ನೀಡ್ತಾರೆ. ನಂತ್ರ ಕಂಟೇನರ್‌ ಕೆಳಗಿಟ್ಟು, ಹಣ ತೆಗೆದುಕೊಂಡು, ಕೋಚ್‌ ಹಿಂದೆ ಓಡಿ ಚಿಲ್ಲರೆ ನೀಡುತ್ತಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯ ಕೆಲಸ ಮತ್ತು ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಬೆಸ್ಟ್‌ ತಂದೆ, ದುಡಿಮೆ, ಜೀವನ ನಿರ್ವಹಣೆಗೆ ಅವರು ಮಾಡುತ್ತಿರುವ ಕೆಲಸ ಮೆಚ್ಚುವಂತಹದ್ದು ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

https://www.instagram.com/reel/C8OJcCtppKG/?utm_source=ig_embed&ig_rid=04f928b8-9f10-4836-b159-c4db30753274

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read