ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಉತ್ಪನ್ನ ಅಥವಾ ಸೇವೆಯ ಸಾಮರ್ಥ್ಯವನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ, ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್‌ನಲ್ಲಿ ಕುಳಿತು ಎಕೆ -47 ನಿಂದ ಗುಂಡು ಹಾರಿಸುವುದು ಹೇಗೆ ಎಂದು ಚಿತ್ರಿಸುವ ಹಳೆಯ ವೀಡಿಯೊ ವೈರಲ್ ಆಗಿದ್ದು, ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.
ಟೆಕ್ಸಾಸ್ ಆರ್ಮರಿಂಗ್ ಕಾರ್ಪೊರೇಷನ್ (ಟಿಎಸಿ) ಸಿಇಒ ಟ್ರೆಂಟ್ ಕಿಂಬಲ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಎಕೆ -47 ನಿಂದ ಗುಂಡು ಹಾರಿಸುತ್ತಿರುವುದನ್ನು ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್ ಎಸ್‌ಯುವಿಯೊಳಗೆ ನೋಡಬಹುದಾಗಿದೆ.
ಕಂಪನಿಯು ಮೂಲತಃ 2014 ರಲ್ಲಿ ಬಿಡುಗಡೆ ಮಾಡಿದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಎಕೆ 47 ನಿಂದ ಸುಮಾರು 12 ಗುಂಡುಗಳನ್ನು ಹಾರಿಸಿ ಕಾರಿನ ಸಾಮರ್ಥ್ಯ ತೋರಿಸಲಾಗಿದೆ. ಕಂಪನಿಯ ಮಾರಾಟ ಮತ್ತು ರಫ್ತು ಅನುಸರಣೆಯ ಮ್ಯಾನೇಜರ್ ಲಾರೆನ್ಸ್ ಕೊಸುಬ್ ಅವರು ಕಾರಿನ ಮೇಲೆ ಗುಂಡು ಹಾರಿಸಿದರು. ಕಾರಿನಲ್ಲಿ ಸಿಇಒ ಟ್ರೆಂಟ್ ಕಿಂಬಲ್ ಕುಳಿತಿದ್ದರು.
ವಿಂಡ್‌ಸ್ಕ್ರೀನ್‌ಗೆ ಗುರಿಪಡಿಸಿದ ಕೊಸುಬ್ ಗುಂಡು ಹಾರಿಸುತ್ತಿದ್ದರೂ, ಒಳಗೆ ಕುಳಿತಿದ್ದ ಕಿಂಬಲ್ ಸ್ವಲ್ಪವೂ ಕದಲಲಿಲ್ಲ. ಬುಲೆಟ್ ಪ್ರೂಫ್ ಸಾಮರ್ಥ್ಯಕ್ಕೆ ಜನರು ತಲೆದೂಗುತ್ತಿದ್ದಾರೆ.