ವಧು ಮತ್ತು ವರನ ನೃತ್ಯ ವೀಡಿಯೊಗಳನ್ನು ಜಾಲತಾಣದಲ್ಲಿ ಸಾಕಷ್ಟು ನೋಡಿರಬಹುದು. ಮದುವೆ ಸಮಾರಂಭದಲ್ಲಿ ನೃತ್ಯ, ಸಂಗೀತ ಇದೀಗ ಹೈಲೈಟ್ ಆಗಿದ್ದು, ಅವುಗಳ ಪೈಕಿ ಕೆಲವು ವೈರಲ್ ಆಗುತ್ತವೆ. ಅದರಲ್ಲಿಯೂ ಮದುಮಕ್ಕಳು ನೃತ್ಯ ಮಾಡಿರುವುದು ಸಾಮಾನ್ಯವಾಗಿ ವೈರಲ್ ಆಗುತ್ತದೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ದಂಪತಿಗಳು ‘ಜೋರು ಕಾ ಗುಲಾಮ್’ ಚಿತ್ರದ ಗೋವಿಂದನ ಪ್ರಸಿದ್ಧ ಗೀತೆ ಖುಲಾ ಹೈ ಮೇರಾ ಪಿಂಜ್ರಾಗೆ ಸ್ಟೆಪ್ ಹಾಕುವುದನ್ನು ನೋಡಬಹುದು. ‘Smart_Graphics99’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಮದುವೆಯ ಉಡುಪುಗಳ ಜೊತೆ ಜೋಡಿ ನರ್ತಿಸಿದೆ. ಈ ಸಮಯದಲ್ಲಿ ಹಾಜರಿರುವ ಇತರ ಅತಿಥಿಗಳು ದಂಪತಿಯನ್ನು ಹುರಿದುಂಬಿಸುವುದನ್ನು ಸಹ ಕಾಣಬಹುದು. ವೀಡಿಯೊವನ್ನು ಹಂಚಿಕೊಂಡ ನಿಮಿಷಗಳ ನಂತರ, ಇದು ಅಂತರ್ಜಾಲದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ಥರಹೇವಾರಿ ಕಮೆಂಟ್ಗಳು ಬರುತ್ತಿವೆ.
https://youtu.be/W64Jbt9mTIk