Video: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದಾಗಲೇ ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಮುಸುಕುಧಾರಿ ಬೈಕ್‌ ಸವಾರರು ವರನ ಸಂಬಂಧಿಯಿಂದ 1.5 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಮದುವೆ ಮೆರವಣಿಗೆಯು ಮಂಗಳವಾರ ರಾತ್ರಿ ಶಿವಪುರಿ ಜಿಲ್ಲೆಯ ಬೈರಾದ್‌ನಿಂದ ಗ್ವಾಲಿಯರ್‌ನ ವೃಂದಾವನ ಉದ್ಯಾನವನಕ್ಕೆ (ಹಳೆಯ ಕಂಟೋನ್ಮೆಂಟ್) ತೆರಳುತ್ತಿತ್ತು. ಮದುವೆ ಮೆರವಣಿಗೆ ಚಿತ್ರೀಕರಣ ಮಾಡುತ್ತಿದ್ದ ವಿಡಿಯೋಗ್ರಾಫರ್ ಕ್ಯಾಮರಾದಲ್ಲಿ ದುಷ್ಕರ್ಮಿಗಳು ಸೆರೆಯಾಗಿದ್ದಾರೆ .

ಮಾಹಿತಿಯ ಪ್ರಕಾರ, ವರ ಸುದೇಶ್ ಸಿಂಗ್ ಸಿಕರ್ವಾರ್ ಅವರ ಮದುವೆ ಮೆರವಣಿಗೆ ರಾತ್ರಿ 9:45 ರ ಸುಮಾರಿಗೆ ಅವರ ಮನೆಯಿಂದ ಗ್ವಾಲಿಯರ್‌ನ ವೃಂದಾವನ ಗಾರ್ಡನ್ ನತ್ತ ಹೊರಟಿತ್ತು. ಅತಿಥಿಗಳೆಲ್ಲ ಸಂತೋಷದಿಂದ ಕುಣಿಯುತ್ತಿದ್ದಾಗ ವರನ ಸಂಬಂಧಿ (ಅವನ ಸಹೋದರಿಯ ಮಾವ) ರೈಸಿಂಗ್ ಬದೌರಿಯಾ ಕೂಡ ಮದುವೆಯ ಮೆರವಣಿಗೆಯಲ್ಲಿ ಹೋಗುತ್ತಿದ್ದರು.

1.5 ಲಕ್ಷ ಮೌಲ್ಯದ ನಗದು ಹಾಗೂ ಕೆಲವು ಮಹತ್ವದ ದಾಖಲೆಗಳಿದ್ದ ಬ್ಯಾಗ್‌ ಅನ್ನು ಅವರು ಹಿಡಿದುಕೊಂಡಿದ್ದು, ಅಷ್ಟರಲ್ಲಿ ಬೈಕ್ ನಲ್ಲಿ ಇಬ್ಬರು ದುಷ್ಕರ್ಮಿಗಳು ಆ ಕಡೆ ಹಾದು ಹೋಗಿದ್ದಾರೆ. ಆಗ ಹಿಂದೆ ಕುಳಿತಿದ್ದ ದುಷ್ಕರ್ಮಿಯೊಬ್ಬ ರೈಸಿಂಗ್ ಅವರ ಹೆಗಲಲ್ಲಿದ್ದ ಬ್ಯಾಗ್ ಕಿತ್ತುಕೊಂಡಿದ್ದು, ಇಬ್ಬರೂ ವೇಗವಾಗಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಇದರ ಬೆನ್ನಲ್ಲೇ ವರನ ತಂದೆ ಕೆಲವು ಅತಿಥಿಗಳೊಂದಿಗೆ ಓಲ್ಡ್ ಕಂಟೋನ್ಮೆಂಟ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ವರನ ತಂದೆ ನಿರಂಜನ್ ಸಿಂಗ್ ಸಿಕರ್ವಾರ್ ಅವರು ನೃತ್ಯದ ವೀಡಿಯೊವನ್ನು ತೋರಿಸಿದ್ದು, ಅದರಲ್ಲಿ ದುಷ್ಕರ್ಮಿಗಳು ಸೆರೆಯಾಗಿದ್ದಾರೆ. ನಂತರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read