![Dwarakish: ದ್ವಾರಕೀಶ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು; ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ನಟ - Kannada News | Kannada actor Dwarakish gives clarification to his death hoax | TV9 ...](https://images.tv9kannada.com/wp-content/uploads/2023/04/Dwarakish.jpg)
ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವ ಹಿರಿಯ ನಟ ದ್ವಾರ್ಕೀಶ್ ಇಂದು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ದ್ವಾರಕೀಶ್ 1966ರಲ್ಲಿ ತೆರೆಕಂಡ ‘ಮಮತೆಯ ಬಂಧನ’ ಚಿತ್ರದಲ್ಲಿ ಅಭಿನಯಿಸಿದ್ದಲ್ಲದೇ ಸಹ ನಿರ್ಮಾಪಕರಾಗಿ ತಮ್ಮ ಸಿನಿ ಪಯಣ ಆರಂಭಿಸಿದರು. 1969 ರಲ್ಲಿ ಬಿಡುಗಡೆಯಾದ ಡಾ. ರಾಜಕುಮಾರ್ ನಟನೆಯ ‘ಮೇಯರ್ ಮುತ್ತಣ್ಣ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾದರು. ನಂತರ ನಾಯಕ ನಟನಾಗಿಯೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು.
ನಟ ದ್ವಾರಕೀಶ್ 2019 ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ಭವ’ ಚಿತ್ರವನ್ನು ಕೊನೆಯದಾಗಿ ನಿರ್ಮಾಣ ಮಾಡಿದ್ದರು. ಇತ್ತೀಚಿಗೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇಂದು ದ್ವಾರಕೀಶ್ ಹುಟ್ಟುಹಬ್ಬಕ್ಕೆ ಹಿರಿಯ ಕಲಾವಿದರು ಸೇರಿದಂತೆ ಹಲವಾರು ನಟ – ನಟಿಯರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.