ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣ: ಕೊಲೆ ಆರೋಪಿ ಪವಿತ್ರಾಗೌಡಗೂ ಶ್ವೇತಾ ಸ್ನೇಹಿತೆ; ತನಿಖೆ ವೇಳೆ ಮಹತ್ವದ ಮಾಹಿತಿ ಬಯಲು

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಬಹಿರಂಗವಾಗುತ್ತಿದೆ. ಶ್ವೇತಾ ಗೌಡ ಕೇವಲ ವರ್ತೂರು ಪ್ರಕಾಶ್ ಗೆ ಮಾತ್ರವಲ್ಲ ರೇಣುಕಾಸ್ವಾಮಿ ಹತ್ಯೆ ಕೇಸ್ ನ ಆರೋಪಿಗಳಿಗೂ ಆಕೆ ಸ್ನೇಹಿತೆ ಎಂಬ ಅಂಶ ಬಯಲಾಗಿದೆ.

ವಂಚನೆ ಪ್ರಕರಣದಲ್ಲಿ ಈಗಾಗಲೇ ಶ್ವೇತಾ ಗೌಡಳನ್ನು ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಶ್ವೇತಾ ಗೌಡ ಕೆಲ ದಿನಗಳ ಹಿಂದೆ ಜೈಲಿನಲ್ಲಿದ್ದ ಕೊಲೆ ಆರೋಪಿ ಪವಿತ್ರಾ ಗೌಡಳನ್ನು ಭೇಟಿಯಾಗಲೆಂದು ಆಕೆಯ ಸ್ನೇಹಿತೆ ಸಮತಾ ಜೊತೆ ಜೈಲಿಗೆ ತೆರಳಿ ಪವಿತ್ರಾಳನ್ನು ಭೇಟಿಯಾಗಿದ್ದಳು. ಪವಿತ್ರಾ ಗೌಡಳನ್ನು ಭೇಟಿಯಾಗಿ ಸಮತಾ ಜೊತೆ ಜೈಲಿನಿಂದ ಶ್ವೇತಾಗೌಡ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ವಿನಯ್ ನ ಸ್ನೇಹಿತೆ ಶ್ವೇತಾ ಗೌಡ. ಅಲ್ಲದೇ ಪವಿತ್ರಾ ಗೌಡಳ ಆಪ್ತ ಸ್ನೇಹಿತೆ ಸಮತಾಳ ಸ್ನೇಹಿತೆ ಕೂಡ ಹೌದು. ಪವಿತ್ರಾ ಗೌಡ ಜೈಲು ಸೇರಿದ್ದ ವೇಳೆ ಶ್ವೇತಾ ಗೌಡ ಪವಿತ್ರಾಗೌಡ ಹಾಗೂ ವಿನಯ್ ನನ್ನು ಭೇಟಿಯಾಗಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read