ಉತ್ತರ ಪ್ರದೇಶದ ವಾರಣಾಸಿಯ ಹೆಣ್ಣು ಬೀದಿ ನಾಯಿಯೊಂದು ನೆದರ್ಲ್ಯಾಂಡ್ನ ತನ್ನ ಹೊಸ ಮಾಲೀಕರೊಂದಿಗೆ ವೀಸಾ ಹಾಗೂ ಪಾಸ್ಪೋರ್ಟ್ ಸಹಿತ ಪ್ರವಾಸಕ್ಕೆ ಹೊರಟಿದೆ.
ಈ ವಿಚಾರವಾಗಿ ಮಾತನಾಡಿದ ವಿದೇಶಿಗ ಮಹಿಳೆ ಆಮ್ಸ್ಟಾರ್ಡ್ಯಾಮ್ ಮೆರಲ್ ಎಂಬವರು ಹೆಣ್ಣು ಶ್ವಾನ ಜಯಾ ಪಾಲನೆಯ ಜವಾಬ್ದಾರಿಯನ್ನು ನಾವು ವಹಿಸಿಕೊಂಡಿದ್ದೇವೆ. ನಾವು ಯಾವಾಗಲೂ ಮನೆಗೆ ಒಂದು ಸಾಕು ಪ್ರಾಣಿ ತರಬೇಕು ಅಂತಾ ಪ್ಲಾನ್ ಮಾಡುತ್ತಿದ್ದೆವು. ಈ ಬಾರಿ ವಾರಣಾಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಶ್ವಾನ ನಮ್ಮ ಗಮನ ಸೆಳೆಯಿತು ಅಂತಾ ಹೇಳಿದ್ದಾರೆ.
ಹೊಸ ಹೊಸ ನಗರಗಳನ್ನು ಅನ್ವೇಷಿಸಬೇಕು ಅಂತಾ ನಾನು ವಾರಣಾಸಿಗೆ ಪ್ರವಾಸಕ್ಕೆ ಬಂದಿದ್ದೆ. ನಾನು ಸುಮ್ಮನೇ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಜಯಾ ನಮ್ಮ ಬಳಿ ಬಂದಳು. ಆಕೆಯ ಗುಣ ನನಗೆ ಇಷ್ಟವಾಯ್ತು. ಈ ಶ್ವಾನ ನಮ್ಮನ್ನೇ ಹಿಂಬಾಲಿಸಲು ಆರಂಭಿಸಿತು. ಮತ್ತೊಂದು ದಿನ ಆಕೆ ಮತ್ತೊಂದು ಬೀದಿ ನಾಯಿಯ ದಾಳಿಗೆ ಒಳಗಾಗಿದ್ದಳು ಎಂದು ಬಾಂಟೆನ್ಬೆಲ್ ಹೇಳಿದ್ದಾರೆ.
ಜಯಾರನ್ನು ಇತರರ ಸಹಾಯದಿಂದ ನಾವು ರಕ್ಷಣೆ ಮಾಡಿದೆವು. ಕಾವಲುಗಾರರೆಲ್ಲ ಸೇರಿ ಆಕೆಯನ್ನು ಉಳಿಸಿದರು. ನಾವು ಮೊದಲು ಆಕೆಯನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಯಾವುದೇ ಯೋಚನೆ ಮಾಡಿರಲಿಲ್ಲ. ಆದರೆ ಈ ಘಟನೆ ಬಳಿಕ ನಾನು ಅಕೆಯನ್ನು ಸುರಕ್ಷಿತ ಸ್ಥಾನದಲ್ಲಿ ಇರಿಸಲು ಬಯಸಿದೆ ಎಂದು ಹೇಳಿದ್ದಾರೆ.
ನನ್ನ ಪ್ರೀತಿಯ ಶ್ವಾನ ಜಯಾಗೆ ವೀಸಾ ಹಾಗೂ ಪಾಸ್ಪೋರ್ಟ್ ವ್ಯವಸ್ಥೆ ಆಗಬೇಕಾಗಿದ್ದರಿಂದ ನಾನು ಭಾರತದಲ್ಲಿ ಅರು ತಿಂಗಳವರೆಗೆ ಇರಬೇಕಾಗಿ ಬಂತು. ಇಷ್ಟು ದಿನಗಳ ಪ್ರಯತ್ನದ ಬಳಿಕ ನಾನು ಕೊನೆಗೂ ಆಕೆಯನ್ನು ನನ್ನೊಂದಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.