ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹವಾಲಾ ದಂಧೆಯ ಲಿಂಕಿರುವುದು ಎಸ್ ಐಟಿ ತನಿಖೆಯಲ್ಲಿ ಬಯಲಾಗಿದೆ.
ವಾಲ್ಮೀಕಿ ನಿಗಮದದಿಂದ ವರ್ಗಾವಣೆಯಾಗಿದ್ದ ಬಹುಕೋಟಿ ಹಣ ಹವಾಲಾ ಮಾರ್ಗದ ಮೂಲಕವಾಗಿ ಹೈದರಾಬಾದ್ ಗ್ಯಾಂಗ್ ಕೈಸೇರಿದೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ತೇಜತಮ್ಮಯ್ಯ ಹೈದರಾಬಾದ್ ನ ಚಂದ್ರಮೋಹನ್, ಶ್ರೀನಿವಾದ್, ಜಗದೀಶ್ ವಿಚಾರಣೆ ವೇಳೆ ನಿಗಮದ ಹಣ ಹವಾಲಾ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಎಸ್ ಐಟಿ ಅಧಿಕಾರಿಗಳು ಹವಾಲಾ ದಂಧೆಕೋರ ಕಾರ್ತಿ ಶ್ರೀನಿವಾಸ್ ಗಾಗಿ ಹುಡುಕಾಟ ನಡೆಸಿದ್ದಾರೆ. ಹವಾಲಾ ಲಿಂಕ್ ಮಾಹಿತಿ ಆಧರಿಸಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಕೂದ ತನಿಖೆ ಆರಂಭಿಸಿದೆ. ಎಸ್ ಐಟಿ ಅಧಿಕಾರಿಗಳು ಇಡಿಗೆ ಅಧಿಕೃತ ಮಾಹಿತಿ ನೀಡಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ.