ನವದೆಹಲಿ: ಉತ್ತರಾಖಂಡದ ಉತ್ತರ ಕಾಶಿ ಸಮೀಪ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಯಶಸ್ವಿಯಾಗಿದ್ದು, ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ.
ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್., ಸೇನೆಯಿಂದ ರಕ್ಷಣಾ ಕಾರ್ಯಚರಣೆ ನಡೆಸಲಾಗಿದ್ದು, ಹಂತ ಹಂತವಾಗಿ ಕಾರ್ಮಿಕರನ್ನು ಹೊರ ತರುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಮೊದಲ ಹಾಗೂ ಎರಡನೇ ಹಂತದಲ್ಲಿ ಕಾರ್ಮಿಕರು ಹೊರಬರುತ್ತಿದ್ದಂತೆ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಕಾರ್ಮಿಕರ ಸಂಬಂಧಿಕರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.
ಪ್ರತಿ ಹಂತದಲ್ಲಿಯೂ ನಾಲ್ವರು ಕಾರ್ಮಿಕರನ್ನು ಹೊರತರಲಾಗುತ್ತಿದ್ದು, ನಾಲ್ಕು ಹಂತದ ಕಾರ್ಯಾಚರಣೆ ಪೂರ್ಣಗೊಂಡಿದೆ. ನವೆಂಬರ್ 12ರಿಂದ 41 ಪುರುಷ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸಿ ಹೊರಗೆ ತಂದಿದ್ದಾರೆ. ನಿರ್ಮಾಣ ಹಂತದ ಸುರಂಗ ಕುಸಿದು ಬಿದ್ದಿದ್ದರಿಂದ ಕಾರ್ಮಿಕರು ಸಿಲುಕಿದ್ದರು. ಅವರಿಗೆ ಪೈಪ್ ಮೂಲಕ ಆಹಾರ, ಆಕ್ಸಿಜನ್ ನೀಡಲಾಗಿತ್ತು.