ಉತ್ತರ ಪ್ರದೇಶದ ಹಾಪುರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿ-ಲಖನೌ ಹೆದ್ದಾರಿಯಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಹಾಪುರ್‌ನ ಗಡ್ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ ಎಂದು ಹಾಪುರ್ ಎಎಸ್‌ಪಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಮೊರಾದಾಬಾದ್‌ನಿಂದ ದೆಹಲಿ ಕಡೆಗೆ ಹೋಗುತ್ತಿದ್ದ ಕಾರ್ ಹಾಪುರ್ ಜಿಲ್ಲೆಯ ಗರ್ಮುಕ್ತೇಶ್ವರ್ ಕೊಟ್ವಾಲಿ ಪ್ರದೇಶದ ಎನ್‌ಹೆಚ್ 9 ರಲ್ಲಿರುವ ಬ್ರಿಜ್‌ಘಾಟ್ ಬಳಿ ನಿಯಂತ್ರಣ ತಪ್ಪಿ ತಪ್ಪು ದಿಕ್ಕಿನಲ್ಲಿ ಹೋಯಿತು. ಅಷ್ಟರಲ್ಲಿ ಕಾರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಾಯಗೊಂಡವರು ಮತ್ತು ಮೃತರನ್ನು ಗುರುತಿಸಲಾಗುತ್ತಿದೆ.
ಸೋಮವಾರ ತಡರಾತ್ರಿ ಕಾರ್ ನಲ್ಲಿ 7 ಮಂದಿ ಮೊರಾದಾಬಾದ್‌ನಿಂದ ದೆಹಲಿ ಕಡೆಗೆ ಹೋಗುತ್ತಿದ್ದರು ಎಂದು ಎಸಿಪಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ. ಗರ್ಮುಕ್ತೇಶ್ವರ ಪೊಲೀಸ್ ಠಾಣೆಯ NH-09 ರಲ್ಲಿರುವ ಬ್ರಿಜ್‌ಘಾಟ್ ತಲುಪಿದಾಗ, ಇದ್ದಕ್ಕಿದ್ದಂತೆ ಚಾಲಕ ಕಾರ್ ನ ನಿಯಂತ್ರಣ ಕಳೆದುಕೊಂಡಿದ್ದು, ಕಾರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರ್ ಡಿವೈಡರ್ ಹತ್ತಿ ತಪ್ಪು ದಿಕ್ಕಿನಲ್ಲಿ ಸಾಗಿದೆ. ಅಷ್ಟರಲ್ಲಿ ಎದುರಿನಿಂದ ಬಂದ ಕ್ಯಾಂಟರ್ ಕಾರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.