ತಲೆಹೊಟ್ಟು ಸಮಸ್ಯೆ ನಿವಾರಿಸಲು ಬಳಸಿ ಈ ನೈಸರ್ಗಿಕ ಶ್ಯಾಂಪೂ

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. ಆದ್ರೆ ಈ ಶಾಂಪೂಗಳು ಲಾಭಕ್ಕಿಂತ ನಷ್ಟ ಮಾಡುವುದೇ ಹೆಚ್ಚು. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಶಾಂಪೂ ಬದಲು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಶಾಂಪೂ ಬಳಸಿ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಖಾದಿ ಹರ್ಬಲ್ ಶಾಂಪೂ : ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಿದ ಶಾಂಪೂ ಇದು. ಖಾದಿ ಹರ್ಬಲ್ ಶಾಂಪೂವಿನಲ್ಲಿ ನೀಮ್ ಮತ್ತು ಅಲೋವೆರಾ ಇದ್ದು, ಕೂದಲಿನ ರಕ್ಷಣೆ ಮಾಡುತ್ತದೆ. ಇದು SLS ಮತ್ತು ಪ್ಯಾರಾಬೆನ್ ಫ್ರೀ ಆಗಿದೆ. ಇದರ ಬೆಲೆ  ಮಾರುಕಟ್ಟೆಯಲ್ಲಿ 200 ಎಂಎಲ್ ಗೆ 210 ರೂಪಾಯಿ.

ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ :  ತಲೆಹೊಟ್ಟು ಕಂಟ್ರೋಲ್ ಮಾಡಲು ಆಯುರ್ವೇದಿಕ್ ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ ಸಹಕಾರಿ. ಈ ಶಾಂಪೂ ಸೋಯಾ ಪ್ರೋಟೀನ್, ಗೋಧಿ ಬೀಜಗಳು ಮತ್ತು ಮೆಂತ್ಯೆ, ನೀಮ್, ಗುಲ್ಘಾಲ್ ಮತ್ತು ಲೆಸಿಥಿನ್ಗಳನ್ನು ಒಳಗೊಂಡಿರುತ್ತದೆ. ಇದು ಕೂದಲು ಮೃದುಗೊಳ್ಳಲು ಸಹಾಯ ಮಾಡುವುದಲ್ಲದೆ ತಲೆಹೊಟ್ಟು ನಿವಾರಿಸುತ್ತದೆ. ಈ ಶಾಂಪೂ 200 ಎಂಎಲ್ ಗೆ 475 ರೂಪಾಯಿ.

ಬಯೋಟಿಕ್ ಬಯೋ ಮಾರ್ಗೊಸಾ ಆಂಟಿ-ಡ್ಯಾಂಡ್ರಫ್ ಶಾಂಪೂ & ಕಂಡಿಷನರ್ : ಇದು 100% ನೈಸರ್ಗಿಕವಾಗಿದ್ದು ತಲೆ ತುರಿಕೆ ಮತ್ತು ಒಣಕೂದಲು, ತಲೆಹೊಟ್ಟು ಸಮಸ್ಯೆ ಕಡಿಮೆ ಮಾಡುತ್ತದೆ. ಈ ಶಾಂಪೂ ಬಳಸಿ ನಿಮ್ಮ ಕೂದಲ ಹೊಳಪನ್ನು ಹೆಚ್ಚಿಸಿಕೊಳ್ಳುವುದಲ್ಲದೆ ತಲೆ ಹೊಟ್ಟಿನಿಂದ ಪಾರಾಗಿ. ಈ ಶಾಂಪೂ 190 ಎಂಎಲ್ ಗೆ 159ರೂಪಾಯಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read