ಇತ್ತೀಚಿನ ದಿನಗಳಲ್ಲಿ ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕಂಪ್ಯೂಟರ್ ಮುಂದೆಯೇ ಮಾಡುತ್ತೇವೆ. ಇದರಿಂದ ಕಂಪ್ಯೂಟರ್ ಅನ್ನು ನಾವು ಹೆಚ್ಚು ಕಾಲ ಬಳಸುವುದರಿಂದ ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಗಳ ಮೇಲೆ ಧೂಳು ಕುಳಿತುಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ.
ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಯಾಕೆಂದರೆ ಅವುಗಳನ್ನು ನೀರಿನಿಂದ ಸ್ವಚ್ಛಗೊಳಿಸಲು ಆಗುವುದಿಲ್ಲ. ಹಾಗಾಗಿ ಅವುಗಳನ್ನು ಸ್ವಚ್ಛಗೊಳಿಸುವಾಗ ಕಂಪ್ಯೂಟರ್ ಸ್ವಿಚ್ ಆಫ್ ಮಾಡಿ. ಹಾಗೇ ಒಮ್ಮೆ ಕೀಬೋರ್ಡ್ ಅನ್ನು ತಲೆಕೆಳಗಾಗಿಸಿ 2 ಬಾರಿ ನಿಧಾನವಾಗಿ ಶೇಕ್ ಮಾಡಿ. ಇದರಿಂದ ಅದರೊಳಗೆ ಇದ್ದ ಧೂಳು, ಕೊಳಕು ಹೊರಗೆ ಬರುತ್ತದೆ. ಬಳಿಕ ಒಣ ಬಟ್ಟೆಯಿಂದ ಕೀಬೋರ್ಡ್ ಅನ್ನು ಒರೆಸಿ.