SBI ವಾಟ್ಸಾಪ್ ಬ್ಯಾಂಕಿಂಗ್‌ ಗೆ ನೋಂದಾಯಿಸಲು ಇಲ್ಲಿದೆ ಟಿಪ್ಸ್

ಸಣ್ಣ ಪುಟ್ಟ ವಿಚಾರಗಳಿಗೂ ಶಾಖೆಗಳಿಗೆ ಬರುವ ತಲೆನೋವನ್ನು ತನ್ನ ಗ್ರಾಹಕರಿಂದ ದೂರ ಮಾಡಲು ದೇಶದ ಬಹುತೇಕ ಎಲ್ಲ ದೊಡ್ಡ ಬ್ಯಾಂಕುಗಳೂ ಸಹ ಆನ್ಲೈನ್ ಸೇವೆಗಳನ್ನು ನೀಡುತ್ತಿವೆ. ‌

ತಮ್ಮದೇ ಜಾಲತಾಣಗಳು ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರ ಬೆರಳ ತುದಿಗೆ ತಲುಪಿರುವ ಬ್ಯಾಂಕಿಂಗ್ ಕ್ಷೇತ್ರ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಾಟ್ಸಾಪ್ ಬ್ಯಾಂಕಿಂಗ್‌ಗೂ ಮುಂದಾಗಿದೆ.

ದೇಶದ ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ SBI ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಗ್ರಾಹಕರಿಗೆ ಸಣ್ಣ ಪುಟ್ಟ ಕ್ವೈರಿಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟಿದೆ.

SBI ವಾಟ್ಸಾಪ್ ಬ್ಯಾಂಕಿಂಗ್‌ಗೆ ಸೈನ್ ಇನ್ ಆಗಲು ಈ ಸರಳ ಹೆಜ್ಜೆಗಳನ್ನು ಪಾಲಿಸಿ:

– SBI ಜಾಲತಾಣ https://bank.sbiಕ್ಕೆ ಭೇಟಿ ನೀಡಿ, ವಾಟ್ಸಾಪ್ ಬ್ಯಾಂಕಿಂಗ್‌ಗೆ ಸೈನ್ ಅಪ್ ಆಗಲು ಇರುವ ಸೂಚನೆಗಳನ್ನು ನೋಡಿ.

– ನಿಮ್ಮ ಮೊಬೈಲ್ ಮೂಲಕ ಜಾಲತಾಣದಲ್ಲಿರುವ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ವಾಟ್ಸಾಪ್ ಸಂಖ್ಯೆಯಿಂದ “Hello” ಎಂದು +919022690226ಗೆ ಸಂದೇಶ ಕಳುಹಿಸಿ. ಬಳಿಕ ಚಾಟ್‌ಬಾಟ್‌ನ ಸೂಚನೆಗಳನ್ನು ಪಾಲಿಸಿ.

– SBIನಲ್ಲಿ ನೋಂದಣಿಯಾಗಿರುವ ನಿಮ್ಮ ಸಂಖ್ಯೆಯಿಂದ ಇದೇ ಫ್ಯಾರ್ಮ್ಯಾಟ್‌ನಲ್ಲಿ +91720893314ಕ್ಕೆ ಎಸ್‌ಎಂಎಸ್ ಸಹ ಮಾಡಬಹುದಾಗಿದೆ.

– ನಿಮ್ಮ ನೋಂದಾಯಿತ ನಂಬರ್‌ನಲ್ಲಿರುವ ನಿಮ್ಮ ವಾಟ್ಸಾಪ್ ಖಾತೆಗೆ SBI ವಾಟ್ಸಾಪ್‌ ಬ್ಯಾಂಕಿಂಗ್‌ಗೆ ನೋಂದಣಿಯಾದ ಖಾತ್ರಿಯ ಸಂದೇಶ ಬರಲಿದೆ.

ಸದ್ಯದ ಮಟ್ಟಿಗೆ SBI ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಈ ಕೆಳಕಂಡ ಒಂಬತ್ತು ಸೇವೆಗಳನ್ನು ಪಡೆಯಬಹುದಾಗಿದೆ:

ಖಾತೆಯಲ್ಲಿನ ಬ್ಯಾಲೆನ್ಸ್ ವಿವರಗಳು

ಮಿನಿ ಸ್ಟೇಟ್ಮೆಂಟ್

ಪಿಂಚಣಿ ಸ್ಲಿಪ್ ಸೇವೆ

ಸಾಲದ ಉತ್ಪನ್ನಗಳ ಬಗೆಗಿನ ಮಾಹಿತಿ (ಗೃಹ, ಸಾಲ, ಚಿನ್ನ, ವೈಯಕ್ತಿಕ, ಶೈಕ್ಷಣಿಕ ಸಾಲಗಳು) – ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು ಹಾಗೂ ಬಡ್ಡಿ ದರಗಳ ವಿವರಗಳು.

ಠೇವಣಿ ಉತ್ಪನ್ನಗಳ ಬಗೆಗಿನ ಮಾಹಿತಿ (ಉಳಿತಾಯ ಖಾತೆ, ರೆಕರಿಂಗ್ ಖಾತೆ, ಟರ್ಮ್ ಠೇವಣಿ – ಲಕ್ಷಣಗಳು ಹಾಗೂ ಬಡ್ಡಿ ದರಗಳು)

ಎನ್‌ಆರ್‌ಐ ಸೇವೆಗಳು (ಎನ್‌ಆರ್‌‌ಇ ಖಾತೆ, ಎನ್‌ಆರ್‌ಓ ಖಾತೆ) – ಲಕ್ಷಣಗಳು ಹಾಗೂ ಬಡ್ಡಿ ದರಗಳು

ಇನ್ಸ್‌ಟಾ ಖಾತೆಗಳ ಆರಂಭಿಸುವಿಕೆ (ಲಕ್ಷಣಗಳು/ಅರ್ಹತೆ/ಅಗತ್ಯತೆಗಳು & ಎಫ್‌ಎಕ್ಯೂ)

ಸಂಪರ್ಕಗಳು/ಸಹಾಯವಾಣಿ ಸಂಖ್ಯೆಗಳು

ಪೂರ್ವ ಅನುಮೋದಿತ ಸಾಲಗಳ ಕುರಿತ ಪ್ರಶ್ನೆಗಳು (ವೈಯಕ್ತಿಕ, ಕಾರು, ದ್ವಿಚಕ್ರ ಸಾಲಗಳು)

SBI ವಾಟ್ಸಾಪ್ ಸೇವೆಗಳನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಿದ ಸಂಖ್ಯೆಯನ್ನೇ ಬಳಸಬೇಕು. ಒಂದು ವೇಳೆ ಆ ಸಂಖ್ಯೆ ನಿಮ್ಮಲ್ಲಿ ಇಲ್ಲವಾದಲ್ಲಿ ಹತ್ತಿರದ SBI ಶಾಖೆಗೆ ಭೇಟಿ ಕೊಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read