ಕೆಲವರು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯ ಸುತ್ತಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಹೂವಿನ ಗಿಡಗಳು ಕೆಲವೊಮ್ಮೆ ಚೆನ್ನಾಗಿ ಬೆಳೆಯುವುದಿಲ್ಲ. ಇಲ್ಲವಾದರೆ ಚೆನ್ನಾಗಿ ಬೆಳೆದ ಗಿಡಗಳನ್ನು ಕೀಟಗಳು ಹಾನಿಗೊಳಿಸುತ್ತವೆ. ಹಾಗಾಗಿ ಕೀಟಗಳ ಹಾವಳಿ ತಪ್ಪಿಸಲು , ಗಿಡಗಳು ಸುಂದರವಾಗಿ ಬೆಳೆಯಲು ಈ ಸಲಹೆ ಪಾಲಿಸಿ.
ಗಿಡಗಳಿಗೆ ಪ್ರತಿದಿನ ನೀರನ್ನು ಹಾಕಿ. ಅಷ್ಟು ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಅದಕ್ಕೆ ಗೊಬ್ಬರಗಳನ್ನು ಹಾಕಬೇಕು. ಅದಕ್ಕಾಗಿ ನೀವು ಮನೆಯಲ್ಲಿ ಅಡುಗೆಗೆ ಬಳಸಿದ ತರಕಾರಿ ಸಿಪ್ಪೆಗಳನ್ನು, ಮೊಟ್ಟೆಯ ಸಿಪ್ಪೆಯನ್ನು ಹಾಕಿ. ಇದರಿಂದ ಸಸ್ಯಗಳಿಗೆ ಉತ್ತಮ ಪೋಷಕಾಂಶ ಸಿಗುತ್ತದೆ.
ಹಾಗೇ ಕೀಟಗಳ ಹಾವಳಿಯನ್ನು ತಪ್ಪಿಸಲು ಮನೆಯಲ್ಲಿ ಅಡುಗೆಗೆ ಬಳಸುವ ದಾಲ್ಚಿನ್ನಿಯನ್ನು ಬಳಸಬಹುದು. ದಾಲ್ಚಿನ್ನಿ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಇದರ ನೀರನ್ನು ಸಸ್ಯಗಳಿಗೆ ಸಿಂಪಡಿಸಿ. ಇದರಿಂದ ಸಸ್ಯಗಳಿಗೆ ಶಿಲೀಂಧ್ರ ಸೋಂಕು ತಗುಲುವುದಿಲ್ಲ ಮತ್ತು ಕೀಟಗಳ ಹಾವಳಿ ಕಡಿಮೆಯಾಗುತ್ತದೆ.
ಹಾಗೇ ಗಿಡ ಬೇಗನೆ ಬೆಳೆಯಲು ಅಲೋವೆರಾದ ಸಿಪ್ಪೆಯನ್ನು ಹಾಕಿ. ಇದು ಗಿಡದ ಬೆಳೆವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಗಿಡದ ಬುಡಕ್ಕೆ ಹಾಕುವುದರಿಂದ ಗಿಡ ದಟ್ಟವಾಗಿ ಹಸಿರಾಗಿ ಬೆಳೆಯುತ್ತದೆ.