ಮಹಿಳೆಯೊಬ್ಬರಿದ್ಧ ಗಾಲಿಕುರ್ಚಿಯನ್ನು ಮೆಟ್ಟಿಲುಗಳ ಕೆಳಗೆ ಎಳೆದ ಆಪಾದನೆ ಮೇಲೆ ಕಾಲೇಜೊಂದರ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜರುಗಿದೆ.
ಕಾರ್ಸನ್ ಬ್ರಿಯರಿ, 23, ಹಾಗೂ ಪ್ಯಾಟ್ರಿಕ್ ಕ್ಯಾರ್ರೋಜ್ಜಿ, 21, ಎಂದು ಗುರುತಿಸಲಾದ ಈ ವಿದ್ಯಾರ್ಥಿಗಳು ಕ್ರಿಮಿನಲ್ ಚೇಷ್ಟೆ ಹಾಗೂ ಅಸಭ್ಯ ನಡವಳಿಕೆ ಆಪಾದನೆ ಸಂಬಂಧ ಮೇ 22ರಂದು ಪ್ರಾಥಮಿಕ ಆಲಿಕೆಯಲ್ಲಿ ಭಾಗಿಯಾಗಬೇಕಿದೆ.
22 ವರ್ಷ ವಯಸ್ಸಿನ ಸಿಡ್ನಿ ಬೆನೆಸ್ ಹೆಸರಿನ ಯುವತಿಯ ಗಾಲಿಕುರ್ಚಿಯೊಂದಿಗೆ ಆಟವಾಡುತ್ತಿದ್ದ ಈ ಯುವಕರು, ನೋಡ ನೋಡುತ್ತಲೇ ಅದನ್ನು ಮೆಟ್ಟಿಗಳ ಕೆಳಗೆ ತಳ್ಳುತ್ತಿರುವ ದೃಶ್ಯವು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರು ಅಫಘಾತವೊಂದರಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಈ ವಿದ್ಯಾರ್ಥಿನಿ 2021 ರಿಂದಲೂ ಗಾಲಿಕುರ್ಚಿಯನ್ನು ಅವಲಂಬಿಸಿದ್ದಾರೆ.
ಮೆರ್ಸಿಹರ್ಸ್ಟ್ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿ ಅಥ್ಲೀಟ್ಗಳನ್ನು, ಮುಂದಿನ ಆದೇಶ ಬರುವವರೆಗೂ ’ಆಂತರಿಕ ಅಮಾನತಿನಲ್ಲಿ’ ಇರಿಸಲಾಗಿದೆ.