ಐದು ಇಂಚು ಎತ್ತರಕ್ಕಾಗಿ ಒಂದೂವರೆ ಕೋಟಿ ರೂ. ಖರ್ಚು ಮಾಡಿದ ಭೂಪ…..!

ಸೌಂದರ್ಯ ವರ್ಧನೆಗೆ ಜನರು ಏನೆಲ್ಲಾ ಸರ್ಕಸ್​ ಮಾಡುವುದು ತಿಳಿದದ್ದೇ. ಆದರೆ ಹೆಚ್ಚಾಗಿ ಹೆಣ್ಣುಮಕ್ಕಳು ಮಾತ್ರ ಹೆಚ್ಚಿನ ಖರ್ಚು ಮಾಡುತ್ತಾರೆ ಎನ್ನಲಾಗುತ್ತದೆ. ಆದರೆ ಕುತೂಹಲ ಎಂಬಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸಿಕೊಳ್ಳಲು ಮಾಡಿದ ಸಾಹಸ ಕೇಳಿದರೆ ಎಲ್ಲರೂ ನಿಬ್ಬೆರಗಾಗುವುದು ಗ್ಯಾರೆಂಟಿ

ಅದೇಕೆ ಎಂದರೆ ಅಮೆರಿಕದ ಒಬ್ಬ ವ್ಯಕ್ತಿ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಲು ನೋವಿನ ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದಾನೆ. ಈತನ ಹೆಸರು ಮೋಸೆಸ್ ಗಿಬ್ಸನ್, ತನ್ನ 5 ಅಡಿ 5 ಇಂಚು ಎತ್ತರದಿಂದಾಗಿ ಯಾವಾಗಲೂ ಅಸುರಕ್ಷಿತ ಭಾವನೆ ಹೊಂದಿದ್ದ ಈತ ಔಷಧಿಗಳಿಂದ ಹಿಡಿದು ‘ಆಧ್ಯಾತ್ಮಿಕ ವೈದ್ಯ’ ವರೆಗೆ ಎಲ್ಲವನ್ನೂ ಪ್ರಯತ್ನಿಸಿದ್ದರು.

ಆದರೆ ಸಾಧ್ಯವಾಗಿರಲಿಲ್ಲ. ಹೆಣ್ಣುಮಕ್ಕಳು ಎತ್ತರದ ಹುಡುಗನನ್ನು ಇಷ್ಟಪಡುತ್ತಾರೆ ಎಂದುಕೊಂಡ ಈ ಭೂಪ ಶಸ್ತ್ರಚಿಕಿತ್ಸೆಯ ಮೊರೆ ಹೋಗಿರುವುದಕ್ಕಿಂತ ಹೆಚ್ಚು ಸುದ್ದಿಯಾದದ್ದು, ಈತ ಐದು ಇಂಚಿಗಾಗಿ ಖರ್ಚು ಮಾಡಿದ ಮೊತ್ತ! ಹೌದು 2016ರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಈಗ ಒಟ್ಟಾರೆಯಾಗಿ $1.65 ಲಕ್ಷ ಅಂದರೆ ಸುಮಾರು 1.35 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ! ಎರಡು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read