ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 ವರ್ಷ ವಯಸ್ಸಿನ ಡ್ರೂ ಅವರು ಈಗ 13 ಮತ್ತು 15 ವರ್ಷದ ರೋರಿ ಮತ್ತು ತಮಿರಾಯ್ ಎಂಬ ಮಕ್ಕಳ ಅಪ್ಪ – ಅಮ್ಮ ಆಗಿದ್ದಾರೆ. ಈ ಕುಟುಂಬದ ವಿಡಿಯೋಗಳು ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿವೆ.
ಮಾಧ್ಯಮದವರೊಂದಿಗೆ ಮಾತನಾಡಿದ ತಾಸಿಯಾ, 28 ನೇ ವಯಸ್ಸಿನಲ್ಲಿ ಪಾಲಕರಾಗಿರುವುದು ತುಂಬಾ ಖುಷಿ ಕೊಟ್ಟಿದೆ. ನಾವು ಅವರಿಗೆ ಅತ್ಯುತ್ತಮ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.
ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಪಾಲಕರ ಮತ್ತು ಮಕ್ಕಳ ನಡುವೆ ಇಷ್ಟು ಕಡಿಮೆ ಅಂತರ ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಇದು ಸರಿಯಲ್ಲ ಎನ್ನುವ ಕಾರಣಕ್ಕೇನೇ ಭಾರತದಲ್ಲಿ ದತ್ತು ಪಡೆಯುವಾಗ ಕನಿಷ್ಠ 18 ವರ್ಷಗಳ ಅಂತರಗಳ ಉಲ್ಲೇಖವಿದೆ ಎಂದಿದ್ದಾರೆ.