Video | ಬಾಳೆಎಲೆ ಮೇಲೆ ದಕ್ಷಿಣ ಭಾರತೀಯ ಭೋಜನ ಸವಿದ ಅಮೆರಿಕನ್ ರಾಯಭಾರಿ

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ದೆಹಲಿಯಲ್ಲಿರುವ ತಮಿಳುನಾಡು ಭವನಕ್ಕೆ ಭೇಟಿ ಕೊಟ್ಟು ದಕ್ಷಿಣ ಭಾರತೀಯ ಶೈಲಿಯ ಆಹಾರ ಸವಿದ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ತಮಿಳುನಾಡು ಭವನದಿಂದ ವಣಕ್ಕಂ! ಇಂದು ನಾನು ಬಾಳೆಎಲೆ ಮೇಲೆ ದಕ್ಷಿಣ ಭಾರತ ಶೈಲಿಯ ಊಟವನ್ನು ಸವಿದೆ. ದಕ್ಷಿಣ ಭಾರತದ ಖಾದ್ಯಗಳ ವೈವಿಧ್ಯತೆ ಕಂಡು ಬೆರಗಾಗಿರುವೆ. ಚೆನ್ನೈ ನಿನಗೆ ನನ್ನ ಹೃದಯ ಸೋತಿದ್ದು ನಿನ್ನಲ್ಲಿಗೆ ಬರಲು ಉತ್ಸುಕನಾಗಿದ್ದೇನೆ,” ಎಂದು ಬಾಳೆಲೆ ಊಟ ಸವಿಯುತ್ತಿರುವ ತಮ್ಮ ವಿಡಿಯೋ ಶೇರ್‌ ಮಾಡಿಕೊಂಡು ತಿಳಿಸಿದ್ದಾರೆ ಗಾರ್ಸೆಟ್ಟಿ.

ಭಾರತಾದ್ಯಂತ ಸಂಚಾರ ಮಾಡುತ್ತಿರುವ ಗಾರ್ಸೆಟ್ಟಿ ಇದಕ್ಕೂ ಮುನ್ನ ಹೈದರಾಬಾದಿ ಬಿರ್ಯಾನಿ ಹಾಗೂ ಖುಬಾನೀ ಕಾ ಮೀಠಾವನ್ನು ಸವಿದಿದ್ದರು.

ಜೂನ್ 14ರಂದು ಚೆನ್ನೈನಲ್ಲಿರುವ ಅಮೆರಿಕನ್ ರಾಯಭಾರ ಕಾರ್ಯಾಲಯಕ್ಕೆ ಭೇಟಿ ಕೊಟ್ಟಿದ್ದ ಗಾರ್ಸೆಟ್ಟಿಗೆ ಆ ವೇಳೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಈ ವೇಳೆ ಎಳನೀರಿನೊಂದಿಗೆ ತಮ್ಮದೊಂದು ಚಿತ್ರವನ್ನು ತೆಗೆದು ಶೇರ್‌ ಮಾಡಿಕೊಂಡಿದ್ದರು ಗಾರ್ಸೆಟ್ಟಿ.

https://twitter.com/USAmbIndia/status/1668936090076553217?ref_src=twsrc%5Etfw%7Ctwcamp%5Etweetembed%7Ctwterm%5E1668936090076553217%7Ctwgr%5E913c5a4a7eeefa479e878c08135a62e06433988a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fus-ambassador-eric-garcetti-tries-south-indian-thali-with-food-served-on-banana-leaf-watch

https://twitter.com/USAmbIndia/status/1669258795388903424?ref_src=twsrc%5Etfw%7Ctwcamp%5Etweetembed%7Ctwterm%5E1669258795388903424%7Ctwgr%5E913c5a4a7eeefa479e878c08135a62e06433988a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fus-ambassador-eric-garcetti-tries-south-indian-thali-with-food-served-on-banana-leaf-watch

https://twitter.com/USAmbIndia/status/1663112948641042437?ref_src=twsrc%5Etfw%7Ctwcamp%5Etweetembed%7Ctwterm%5E1663112948641042437%7Ctwgr%5E913c5a4a7eeefa479e878c08135a62e06433988a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fus-ambassador-eric-garcetti-tries-south-indian-thali-with-food-served-on-banana-leaf-watch

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read