ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಪ್ರವಾಸದಲ್ಲಿದ್ದು, ಬಹಳ ಎಂಜಾಯ್ ಮಾಡಿದಂತೆ ತೋರುತ್ತಿದೆ. ಟ್ವಿಟರ್‌ನಲ್ಲಿ ಅವರು ಹಲವಾರು ಅನುಭವಗಳನ್ನು ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಹಲವರ ಗಮನವನ್ನು ಸೆಳೆದಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಮನ್ನತ್‌ನಲ್ಲಿ ಭೇಟಿಯಾಗುವುದರಿಂದ ಹಿಡಿದು ಇರಾನಿನ ಕೆಫೆಯಲ್ಲಿ ಚಹಾ, ಖಾದ್ಯ ಸೇವಿಸಿ ಬಹಳಷ್ಟು ಆನಂದಿಸಿದರು.
ಮುಂಬೈನಲ್ಲಿ ತಮ್ಮ ಮೊದಲ ದಿನದಿಂದು ಗಾರ್ಸೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾದರು. ಮುಂಬೈನಲ್ಲಿರುವ ಮಹಾತ್ಮಾ ಗಾಂಧಿಯವರ ಮನೆಯಾಗಿರುವ ಮಣಿ ಭವನಕ್ಕೂ ಅವರು ಭೇಟಿ ನೀಡಿದರು. ಅವರು ಗಾಂಧಿಯವರ ಅಸಾಧಾರಣ ಜೀವನದ ದಾಖಲೆಗಳನ್ನು ಹುಡುಕಾಡಿದ್ರು. ಬಳಿಕ ಗಾರ್ಸೆಟ್ಟಿ ವಿಶ್ವಪ್ರಸಿದ್ಧ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೂ ಭೇಟಿ ನೀಡಿದರು. ಅವರು ಎನ್ಎಂಎಸಿಸಿ ಯ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಬ್ರಾಡ್‌ವೇ ಮ್ಯೂಸಿಕಲ್ ‘ದಿ ಸೌಂಡ್ ಆಫ್ ಮ್ಯೂಸಿಕ್’ ನ ಪಾತ್ರವರ್ಗವನ್ನು ಭೇಟಿಯಾದರು.
ಗಾರ್ಸೆಟ್ಟಿ ಅವರು ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ನಿವಾಸ ಮನ್ನತ್‌ನಲ್ಲಿ ಭೇಟಿಯಾದರು ಮತ್ತು ಅವರೊಂದಿಗೆ ಫೋಟೋ ಕ್ಲಿಕ್ಕಿಸಿದ್ರು. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿಯನ್ನೂ ಭೇಟಿಯಾದರು.
ಗೇಟ್‌ವೇ ಆಫ್ ಇಂಡಿಯಾದ ಪ್ರಯಾಣವೂ ಅವರ ಪ್ರವಾಸದಲ್ಲಿತ್ತು. ಗಾರ್ಸೆಟ್ಟಿ ಅವರು ಮುಂಬೈನಲ್ಲಿ ವಾಕ್ ಮಾಡಿದ್ರು. ಹೆರಾಸ್ ಇನ್‌ಸ್ಟಿಟ್ಯೂಟ್ ಮ್ಯೂಸಿಯಂನಲ್ಲಿ ಬೌದ್ಧ, ಕ್ರಿಶ್ಚಿಯನ್, ಜೈನ ಮತ್ತು ಶೈವ ಶಿಲ್ಪಗಳ ವಿಶ್ವ ದರ್ಜೆಯ ಸಂಗ್ರಹವನ್ನು ಹೊಂದಿರುವ ಹಿಂದೂ ದೇವಾಲಯ, ಮುಸ್ಲಿಂ ಮಸೀದಿ, ಜೊರಾಸ್ಟ್ರಿಯನ್ ದೇವಾಲಯ ಮತ್ತು ಕ್ಯಾಥೋಲಿಕ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು.
ಅಲ್ಲದೆ, ರಾಜತಾಂತ್ರಿಕರು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ಭೇಟಿ ಮಾಡಿದರು. ಮಹೀಂದ್ರ ರೈಸ್ ಎಲೆಕ್ಟ್ರಿಕ್ ವೆಹಿಕಲ್‌ನಲ್ಲಿ ದಕ್ಷಿಣ ಮುಂಬೈನಾದ್ಯಂತ ಸವಾರಿ ಮಾಡಿ ಆನಂದಿಸಿದರು.